



ಇನ್ನು ಮುಂದೆ ಸುಖಾ ಸುಮ್ಮನೆ ನಿಲ್ಲಿಸಿ ವಾಹನದ ದಾಖಲೆ ಪರಿಶೀಲಿಸುವಂತಿಲ್ಲ ಎಂದು ಪೋಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಸೂದ್ ಟ್ವಿಟ್ ಮಾಡಿದ್ದಾರೆ. ಪೋಲಿಸ್ ನಿಲ್ಲಿಸಿ ವಾಹನ ತಪಾಸಣೆ ಮಾಡುತ್ತಿದ್ದ ಕಾರಣ ಅನೇಕ ಕಡೆಗಳಲ್ಲಿ ಟ್ರಾಫಿಕ್ ಸಮಸ್ಯೆ ಸೇರಿದಂತೆ ಅನೇಕ ಅಪಘಾತ ಗಳು ನಡೆಯುತಿದ್ದವು
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಣ್ಣಿಗೆ ಕಾಣುವಂತಹ ತಪ್ಪುಗಳನ್ನು ವಾಹನ ಸವಾರರು ಮಾಡಿದ ವೇಳೆ ಅಂತವರನ್ನು ಹಾಗೂ ಕುಡಿದು ವಾಹನ ಚಲಾಯಿಸುವವರ ದಾಖಲೆಗಳನ್ನು ಮಾತ್ರ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ಅಂದರೆ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುವವರು, ತ್ರಿಬ್ಬಲ್ ರೈಡಿಂಗ್, ಸಿಗ್ನಲ್ ಜಂಪ್ ಮಾಡುವುದು ಮೊದಲಾದ ಕಣ್ಣಿಗೆ ಕಾಣುವಂತಹ ಟ್ರಾಫಿಕ್ ನಿಮಗಳನ್ನು ಉಲ್ಲಂಘಿಸಿದ ವೇಳೆ ಅಂತಹ ವಾಹನ ಸವಾರರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ. ಆದರೆ ತಪಾಸಣೆ ಹೆಸರಲ್ಲಿ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಲು ಇನ್ನು ಮುಂದೆ ಅವಕಾಶವಿರುವುದಿಲ್ಲ. ಎಂದು ಹೇಳಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.