



ಹೊಸದಿಲ್ಲಿ: ವಿವಾದಿತ “ದ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಲೇ ಇದೆ. ಸಿನೆಮಾವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಲ ಸರಕಾರದ ವಿರುದ್ಧ ಸಿನೆಮಾ ತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.
ದಕ್ಷಿಣದ ರಾಜ್ಯಗಳ ಚಿತ್ರಣವನ್ನು ಕೀಳಾಗಿಸುವಂತೆ ಸಿನೆಮಾವನ್ನು ಚಿತ್ರಿಸಲಾಗಿದೆ ಎಂದು ಆರೋಪಿಸಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಸಿನೆಮಾ ಪ್ರದರ್ಶನ ನಿಷೇಧಿಸಿದ್ದರು. ಈ ಹಿನ್ನೆಲೆ ಸಿನೆಮಾ ನಿರ್ಮಾಪಕರಾದ ವಿಪುಲ್ ಶಾ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿ ದ್ದಾರೆ. ಅರ್ಜಿಯಲ್ಲಿ ತಮಿಳುನಾಡಿನಲ್ಲಿ ಸಿನೆಮಾ ಪ್ರದ ರ್ಶನಕ್ಕೆ ಎದುರಾಗುತ್ತಿರುವ ಅಡ್ಡಿಗಳನ್ನು ಪರಿಗಣಿಸಿ, ಭದ್ರತೆ ಒದಗಿಸಲು ರಾಜ್ಯಸರಕಾರಕ್ಕೆ ಸೂಚನೆ ನೀಡು ವಂತೆಯೂ ಮನವಿ ಮಾಡಲಾಗುವುದು ಎನ್ನಲಾಗಿದೆ. ನಿರ್ಮಾಪಕ ಸಂಘದ ಆಕ್ಷೇಪ: ಸಿನೆಮಾ ನಿಷೇಧದ ಬಗ್ಗೆ ರಾಜ್ಯಗಳು ತೆಗೆದುಕೊಳ್ಳುತ್ತಿರುವ ಏಕಮುಖ ನಿರ್ಣಯದ ಬಗ್ಗೆ ಭಾರತೀಯ ಸಿನೆಮಾ ನಿರ್ಮಾಪಕರ ಸಂಘ ಆಕ್ಷೇಪಿಸಿದೆ. ಸಿನೆಮಾ ಪ್ರದರ್ಶನಗೊಳ್ಳಬೇಕೇ, ಬೇಡವೇ ಎನ್ನುವುದು ಕೇವಲ ಸೆಂಟ್ರಲ್ ಬೋರ್ಡ್ ಆಫ್ ಸಿನೆಮಾ ಸರ್ಟಿಫಿಕೇಶನ್‌ಗೆ ಇರುವ ಹಕ್ಕು. ಅದನ್ನು ಮಾಡಬೇಕಿರುವುದು ರಾಜ್ಯಗಳಲ್ಲ ಎಂದಿದೆ.
ಶಿವಸೇನೆ ಕಿಡಿ: ಮತ್ತೊಂದೆಡೆ ಬಿಜೆಪಿಯೇತರ ರಾಜ್ಯಗಳಲ್ಲಿನ ಮಹಿಳೆಯರ ನಾಪತ್ತೆ ಸಂಖ್ಯೆಯನ್ನು ಮುಂದಿಟ್ಟು ಸಿನೆಮಾವನ್ನು ಸಮರ್ಥಿಸುತ್ತಿರುವ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ತಿರುಗೇಟು ನೀಡಿದೆ. ಮೋದಿ-ಅಮಿತ್ ಶಾ ಅವರ ಅಂಕೆಯಲ್ಲೇ ಇರುವ ಗುಜರಾತ್‌ನಲ್ಲಿ ಕಳೆದ 5 ವರ್ಷದಲ್ಲಿ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.