



ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ ನ ಜಂತ್ರ ಪ್ರದೇಶದಲ್ಲಿ ನಾಗಪುರದ ಖಾಸಗಿ ಕಂಪೆನಿಯೊಂದು ಗುಟ್ಟಾಗಿ ಸರ್ವೆ ನಡೆಸುತಿದ್ದು ಜನರ ನಿದ್ದೆ ಗೆಡಿಸಿದೆ . ಸೈಲೆಂಟ್ ಅಗಿದ್ದ ಜಂತ್ರ ಗುಡ್ಡದಲ್ಲಿ ಗಣಿಗಾರಿಕೆಯ ಸದ್ದು ಕೇಳಲಿದೆಯೆ ಎನ್ನುವುದು ಜನರ ಪ್ರಶ್ನೆಯಾಗಿದೆ .ಜಿಲೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ ಅಡಿ ನೆಲದ ಗುರುತ್ವ ಮತ್ತು ಕಾಂತೀಯ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಸರ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು ಉಡುಪಿ ಅಪರ ಜಿಲ್ಲಾಧಿಕಾರಿ ಸಹಿಯುಳ್ಳ ಪತ್ರ ವನ್ನು ತೋರಿಸಿ ಗ್ರಾಮಸ್ಥರನ್ನು ಹೆದರಿಸುತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ
. ಅಕ್ರಮವಾಗಿ ಸರ್ವೆ ನಡೆಯುತ್ತಿರುವುದರಿಂದ ಗ್ರಾಮಸ್ಥರು ಮನೆ ಮಠ ಕಳೆದುಕೊಳ್ಳುವ ಭೀತಿ ಎದುರಾಗಿದೆ . ಮಹಾರಾಷ್ಟ್ರ ನಾಗಪುರದ ಮಿನರಲ್ ಎಕ್ಸ್ ಪ್ಲೋರೇಶನ್ ಹಾಗೂ ಕನ್ಸಲ್ಟನ್ಸಿ ಲಿಮಿಟೆಡ್ ಖಾಸಗಿ ಸರ್ವೆಯನ್ನು ಗುತ್ತಿಗೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದ್ದು ,ಕಾಪು ತಾಲೂಕಿನ ಬಂಟಕಲ್ಲು ಶಿರ್ವ ಪ್ರದೇಶದಲ್ಲಿ ಸರ್ವೆ ನಡೆಸುತಿದ್ದಾಗ ಗ್ರಾಮಸ್ಥರು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೆ ಸ್ಥಗಿತ ಗೊಳಿಸಿ ಬೆಳ್ಮಣ್ಣ ಜಂತ್ರದ ಗುಡ್ಡ ದ ಮೇಲೆ ಸರ್ವೆ ನಡೆಸಲು ಮುಂದಾಗಿದೆ. ಈಗಾಗಲೆ ಹತ್ತು ಜನರ ತಂಡವು ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದು ಸ್ಥಳೀಯ ರಿಗೆ ಮಾಹಿತಿ ನೀಡುತಿಲ್ಲ ಎಂದು ಜನರು ದೂರುತಿದ್ದಾರೆ . . ಅಪರ ಜಿಲ್ಲಾಧಿಕಾರಿಗಳಿಂದ ಸರ್ವೆ ನಡೆಸುವ ಬಗ್ಗೆ ಪತ್ರ ಲಗತ್ತಿಸಿದ್ದು , ಸಹಕರಿಸಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. - ಸಂದೀಪ್ ,ಹಿರಿಯ ಭೂ ವಿಜ್ಞಾನಿ , ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಅಕ್ರಮ ವಾಗಿ ಸರ್ವೆ ನಡೆಯುತ್ತಿರುವುದರಿಂದ ಸ್ಥಳೀಯ ರಿಗೆ ಮಾಹಿತಿ ನೀಡಿಲ್ಲ. ಈಗಾಗಲೇ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗುತಿದ್ದೇವೆ .ಮನೆ ಮಠ ಕಳೆದುಕೊಳ್ಳಲು ನಾವು ತಯಾರಿಲ್ಲ. ಜಂತ್ರ ಗುಡ್ಡ ಸಮೃದ್ಧ ಪ್ರದೇಶವಾಗಿದ್ದು ಸೂಕ್ಷ್ಮ ವಲಯವಾಗಿದೆ ಇಲ್ಲಿ ಯಾವುದೇ ಚಟುವಟಿಕೆ ನಡೆಸಲು ಅಸ್ಪದ ನೀಡುವುದಿಲ್ಲ .
ರಾಕೇಶ್ ಸಾಮಾಜಿಕ ಹೋರಾಟ ಗಾರರು ಜಂತ್ರ ಬೆಳ್ಮಣ್
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.