



ವಿಜಯನಗರ: ಚಾಲುಕ್ಯರ ಕಾಲದ ಐತಿಹಾಸಿಕ ಕಟ್ಟಿ ಬಸವೇಶ್ವರ ದೇಗುಲದಲ್ಲಿನ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗುತ್ತದೆ.
ವಿಜಯನಗರದ ಹೂವಿನ ಹಗಡಲಿಯ ಹಿರೇಹಡಗಲಿ ಗ್ರಾಮದಲ್ಲಿರುವ ದೇಗುಲದಲ್ಲಿ ಪ್ರತಿ ವರ್ಷ ಯುಗಾದಿಯ ಅಮಾವಾಸ್ಯೆ ಹಾಗೂ ಹಬ್ಬದ ದಿನ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳ ಸ್ಪರ್ಶವಾಗುತ್ತದೆ.
ಸುಮಾರು 1 ನಿಮಿಷ ಲಿಂಗದ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತವೆ. ಬೇರೆ ಬೇರೆ ಊರುಗಳಿಂದ ಸಹಸ್ರಾರು ಜನರು ಆಗಮಿಸಿ ಸೂರ್ಯನ ಕಿರಣಗಳ ಸ್ಪರ್ಶದಿಂದ ಕಂಗೊಳಿಸುವ ಶಿವನನ್ನು ಕಣ್ತುಂಬಿಕೊಂಡು ಭಕ್ತಿಪರವಶರಾಗುತ್ತಾರೆ.
ಪ್ರತಿ ವರ್ಷ ಯುಗಾದಿ ಅಮಾವಾಸ್ಯೆ ದಿನ ಶಿವಲಿಂಗದ ದರ್ಶನ ಪಡೆಯಲು ಸೂರ್ಯ ಬರುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆ. ಈ ದಿನದಂದು ದೇವಾಲಯದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ನಡೆಯುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.