logo
WhatsApp Image 2026-04-02 at 14.46.04.jpeg
hindalco everlast.jpeg

ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಸೂರ್ಯ ಪುರೋಹಿತ್ ಗೆ ಸನ್ಮಾನ*

ಟ್ರೆಂಡಿಂಗ್
share whatsappshare facebookshare telegram
8 Oct 2021
post image

ಕಾರ್ಕಳ: ಕಾರ್ಕಳ ಶ್ರೀನಿವಾಸ ಸೇವಾ ಟ್ರಸ್ಟ್( ರಿ) ಹಾಗೂ ಸುಮೇಧ ಫ್ಯಾಶನ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಶನ್ ಡಿಸೈನಿಂಗ್ ಇದರ ಆಶ್ರಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಕೇವಲ 3 ನಿಮಿಷದಲ್ಲಿ ಸೂರ್ಯೋದಯದ ಚಿತ್ರ ಬಿಡಿಸಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಸೂರ್ಯ ಪುರೋಹಿತ್ ಗೆ ಸನ್ಮಾನ ಕಾರ್ಯಕ್ರಮವು ಕಾರ್ಕಳ ದ ಎಸ್ ಜೆ ಆರ್ಕೇಡ್ ನ ಸುಮೇಧ ಫ್ಯಾಶನ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ನಡೆಯಿತು ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ ಪುರೋಹಿತ್ ಅವರು ನಾವು ಇಂದು ಕಷ್ಟಪಟ್ಟರೆ ಮುಂದೆ ಸುಖವಾಗಿರಬಹುದು ಸಾಧಿಸುವ ಛಲವೊಂದಿದ್ದರೆ ನಮ್ಮ ಜೀವನದಲ್ಲಿ ಖಂಡಿತವಾಗಿಯೂ ಮುಂದೆ ಬರಬಹುದು ಎಂದರು. ಸಂಸ್ಥೆಯಲ್ಲಿ ಕೋರ್ಸ್ ಮುಗಿಸಿ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಮುಖ್ಯಸ್ಥರಾದ ಸಾಧನ ಜಿ ಆಶ್ರಿತ್ ಅವರು ನಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ನಮ್ಮನ್ನು ಎಂದು ಎಂದಿಗೂ ಬಿಟ್ಟು ಹೋಗುವುದಿಲ್ಲ ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ ಅವರು ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಹೋದರೂ ನಾವು ಅವರಬಗ್ಗೆವಿಚಾರಿಸುತ್ತೇವೆ ಮತ್ತು ಅವರ ಸಂಪರ್ಕದಲ್ಲಿರುತ್ತವೆ. ವಿದ್ಯಾರ್ಥಿಗಳು ಫ್ಯಾಷನ್ಡಿಸೈನರ್ ಆಗಿ ಹೊಸ ಆಯಾಮ ಕಂಡು ಹಿಡಿಯಬೇಕು ಎಂದರು

ಈ ಸಮಯದಲ್ಲಿ ಸಂಸ್ಥೆಯ ಉಪನ್ಯಾಸಕಿಯಾದ ಸಹನಾ ನವರು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ನೀವು ಕಾರ್ಯನಿರ್ವಹಿಸುವ ಹೋಗುತ್ತಿರುವ ಕಂಪನಿಗಳಲ್ಲಿ ಒಳ್ಳೆಯ ಫ್ಯಾಶನ್ ಡಿಸೈನರ್ ಆಗಿ ನಿಮ್ಮ ತಂದೆ-ತಾಯಿ ಮತ್ತು ನಮ್ಮ ಸಂಸ್ಥೆಯ ಒಳ್ಳೆಯ ಹೆಸರನ್ನು ತನ್ನಿ ಎಂದು ಹಾರಿಸಿದರು ಈ ಸಂದರ್ಭದಲ್ಲಿ ವಿದ್ಯಾಭ್ಯಾಸ ಮುಗಿಸಿದ ಪೂಜಾ .ಅಶ್ವಿನಿ ಮತ್ತು ನಿಧಿಶ್ರೀ ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.