



ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಮಂಗಳೂರು ವಿಶ್ವವಿದ್ಯಾನಿಲಯದ ನೇತ್ರತ್ವದಲ್ಲಿ ಮನ್ವಂತರ-ಶಿಕ್ಷಣದ ಕಡೆಗೆ ಒಂದು ಹೆಜ್ಜೆ ಎಂಬ ವಿಶೇಷ ಶೀರ್ಷಿಕೆಯಡಿ, ಛತ್ರಪತಿ ಫೌಂಡೇಶನ್ ನ ನೇತ್ರತ್ವದಲ್ಲಿ ಕಾರ್ಕಳ ತಾಲೂಕಿನ ಆಯ್ದ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವಂತಹ ದ್ವಿತೀಯ ಪಿಯುಸಿ ಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಮಾಹಿತಿ ಕಾರ್ಯಗಾರವು ಇಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾಜಿ ಶಾಸಕರು, ವಿಧಾನ ಪರಿಷತ್ ಕರ್ನಾಟಕ ಸರಕಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ವಿ. ಸುನೀಲ್ ಕುಮಾರ್, ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಇಲಾಖಾ ಸಚಿವರು ಉದ್ಘಾಟಿಸಿದರು. ಸನ್ಮಾನ್ಯ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ, ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ,ಶ್ರೀ ಮಾರುತಿ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ, ಶ್ರೀ ಮೋಹನ್ ಪಡಿವಾಳ್ ಸಿಂಡಿಕೇಟ್ ಸದಸ್ಯರು ಮಂಗಳೂರು ವಿಶ್ವವಿದ್ಯಾನಿಲಯ, ಎಮ್. ಕೆ. ವಿಜಯ ಕುಮಾರ್, ಹಿರಿಯ ನ್ಯಾಯವಾದಿಗಳು ಕಾರ್ಕಳ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಕರುಣಾಕರ್ ಕೋಟೆಗಾರ್, ಮನ್ವಂತರ ಸಂಸ್ಥೆಯ ಅಧ್ಯಕ್ಷರಾದ ಅಭಿಷೇಕ್ ಸುವರ್ಣ, ಛತ್ರಪತಿ ಫೌಂಡೇಶನ್ ನ ಅಧ್ಯಕ್ಷರಾದ ಗಿರೀಶ್ ರಾವ್ ಉಪಸ್ಥಿತರಿದ್ದರು. ಶಿರ್ಡಿ ಸಾಯಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಸಂಯೋಜಕ ಆಶೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಶ್ರೀ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.