



ಬೆಳ್ತಂಗಡಿ: ಪ್ರತಿಭಾವಂತ ಕಬಡ್ಡಿ ಆಟಗಾರ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ, ಪುದುವೆಟ್ಟು ಗ್ರಾಮದ ಕುಬಲ ನಿವಾಸಿ ಸ್ವರಾಜ್ (24) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಇಂದು ಆ.31 ರಂದು ಬೆಳಿಗ್ಗೆ ನಡೆದಿದೆ.
ಇವರು ಪ್ರಸುತ್ತ ಧರ್ಮಸ್ಥಳದಲ್ಲಿ ವಾಸವಾಗಿದ್ದು ಇವರ ಹಳೆಮನೆ ಇರುವ ಪುದುವೆಟ್ಟುಗೆ ಅವರು ಹೋಗಿದ್ದರು. ಅಲ್ಲಿ ಸ್ನಾನ ಮಾಡುವ ಕೊಠಡಿಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಜಿರೆಯ ಸಮೀಪ ಖಾಸಗಿ ಕಂಪನಿಯೊಂದರಲ್ಲಿ ಅವರು ಉದ್ಯೋಗವನ್ನು ನಿರ್ವಹಿಸುತ್ತಿದ್ದರು. ತಂದೆ ಸತೀಶ್ ಮತ್ತು ತಾಯಿ, ಸಹೋದರಿ ಸ್ವಾತಿ ಹಾಗೂ ಸಹೋದರಿ ಕುಟುಂಬ ವರ್ಗವನ್ನು ಅಗಲಿದ್ದಾರೆ. ಸಾವಿಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.