



ಕಾರ್ಕಳ : ಕಾರ್ಕಳ ತಾಲೂಕಿನ ಹಿರ್ಗಾನ ನೆಲ್ಲಿಕಟ್ಟೆ ಕೊತ್ತಲಿಗೆ ಎಂಬಲ್ಲಿ ರಸ್ತೆಯ ತಿರುವಿನಲ್ಲಿ ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತ ಜೂ.3 ಸಂಜೆ ನಡೆದಿದೆ. ಕಾರ್ಕಳ ದಿಂದ ಅಜೆಕಾರು ಕಡೆಗೆ ವೇಗವಾಗಿ ಬರುತಿದ್ದ ಬೈಕ್ , ನೆಲ್ಲಿಕಟ್ಟೆ ಕೊತ್ತಲಿಗೆ ಕಡೆಗೆ ಸಾಗುತಿದ್ದ ಟಾಟ ಏಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರರು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಮೈಲಿಗಲ್ಲಿಗೆ ಬಡಿದಿದ್ದಾರೆ ಎನ್ನಲಾಗಿದೆ. ಈ ತಿರುವಿನಲ್ಲಿ ಅನೇಕ ರಸ್ತೆಯ ಅಗಲಿಕರಣ ಗೊಳಿಸಿದ್ದರು ಮತ್ತೆ ಅಪಘಾತಗಳು ಸಂಭವಿಸುತಿದ್ದು ಸ್ಥಳಿಯರ ನಿದ್ದೆಗೆಡಿಸಿದೆ . ರಸ್ತೆಗೆ ಹಂಪ್ಸ್ ಅಳವಡಿಸ ಬೆಕೆಂದು ಸ್ಥಳಿಯರು ಅಗ್ರಹಿಸಿದ್ದಾರೆ ಇಬ್ಬರು ಸವಾರರು ಅಜೆಕಾರಿನವರೆಂದು ತಿಳಿದು ಬಂದಿದ್ದು , ಟಾಟಾ ಏಸ್ ಸ್ಥಳೀಯರಿಗೆ ಸೇರಿದ್ದು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.