



ಬೆಂಗಳೂರು: ಕಳೆದ ಜನವರಿಯಲ್ಲಿ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಆದರೆ ಚುನಾವಣಾ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆಯು ಮುಂದೂಡಲಾಗಿತ್ತು. ಇದೀಗ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಜೂನ್ 6 ರಿಂದ ಜುಲೈ 31ರೊಳಗೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಶುಕ್ರವಾರ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ. ವರ್ಗಾವಣೆ ಪ್ರಕ್ರಿಯೆಗೆ ವೇಳಾಪಟ್ಟಿ ಬದಲಾಯಿಸಲಾಗಿದ್ದು ಉಳಿದಂತೆ 2022ರ ಡಿ. 26ರಂದು ಹೊರಡಿಸಲಾದ ವೇಳಾಪಟ್ಟಿ ಪ್ರಕಾರ ಉಳಿದೆಲ್ಲ ಅಂಶಗಳು ಯಥಾವತ್ತಾಗಿ ಮುಂದುವರೆಯಲಿದೆ ಎಂದು ಸೂಚಿಸಲಾಗಿದೆ.
ಜೂನ್ 6ರಂದು ಕರಡು ಪ್ರತಿ ಪ್ರಕಟಿಸಿ ಆಕ್ಷೇಪಣೆಗೆ ಜೂನ್ 10ರವರೆಗೆ ಅವಕಾಶ ನೀಡಲಾಗುವುದು. ಜೂನ್ 17ರಿಂದ ಬ್ಲಾಕ್ ಮತ್ತು ಜಿಲ್ಲಾಮಟ್ಟದಲ್ಲಿ ಕೌನ್ಸಿಲಿಂಗ್ ಆರಂಭವಾಗಲಿದ್ದು ಬ್ಲಾಕ್ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಕೌನ್ಸಲಿಂಗ್ ಜೂನ್ 20ರಂದು ನಡೆಯಲಿದೆ. ಜೂನ್ 8 ರಿಂದ 26 ವರೆಗೆ ತಾಂತ್ರಿಕ ಹುದ್ದೆಗಳ ವರ್ಗಾವಣೆ ನಡೆಯಲಿದ್ದು ಜಿಲ್ಲಾ ಹಂತದ ವರ್ಗಾವಣೆ ಕೌನ್ಸಲಿಂಗ್ ಜು. 10 ರಿಂದ 17ರವರೆಗೆ ನಡೆಯಲಿದೆ. ಜು.17ರಿಂದ 26 ವರೆಗೆ ವಿಬಾಗಿಯ ಹಂತದ ವರ್ಗಾವಣೆ ಹಾಗೂ ವಿಭಾಗೀಯ ಹಂತದ ವರ್ಗಾವಣೆ (ಹೊರಗೆ) ಜು. 25ರಿಂದ ಜುಲೈ 31ರವರೆಗೆ ನಡೆಯಲಿದೆ ಎಂದು ಸೂಚಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ ಕಾವೇರಿ ಈ ಕುರಿತು ಮಾತನಾಡಿದ್ದು ಪ್ರಚಲಿತ ಹೆಚ್ಚುವರಿ ಶಿಕ್ಷಕರ ಆದ್ಯತೆ ಸಲ್ಲಿಸುವಾಗ ವಿನಾಯತಿ, ಆದ್ಯತೆ ಕೋರಿ ಸಲ್ಲಿಸುವ ದಾಖಲೆಗಳನ್ನು ಮತ್ತು ಇತರ ಸೇವಾ ಸಮಿತಿಯನ್ನು ಅಪ್ಲೋಡ್ ಮಾಡುವಾಗ ಎಚ್ಚರಿಕೆ ವಹಿಸಬೇಕಾಗಿದ್ದು ಒಂದು ವೇಳೆ ತಪ್ಪಾಗಿ ಅರ್ಜಿ ಸಲ್ಲಿಕೆ ಮಾಡಿದರೆ ಪರಿಷ್ಕರಣೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.