



ಶಿಕ್ಷಣ ವ್ಯಕ್ತಿಗಳ ವ್ಯಕ್ತಿತ್ವವನ್ನು ರೂಪಿಸಿ, ಸಮಾಜ ಮುಖಿಯಾಗಿ ಬೆಳೆಸಿದ್ದಲ್ಲಿ ಅದೇ ಸರ್ವಶ್ರೇಷ್ಠ ಶಿಕ್ಷಣ, ಶಿಕ್ಷಣ ಎಂದರೆ ಶಿಕ್ಷಣವು ಪಠ್ಯದ ಜ್ಞಾನಮಾತ್ರವಾಗಿರದೆ ಪಠ್ಯೇತರ ಜ್ಞಾನಸಂಪಾದನೆಯ ಆಗರವಾಗಿದೆ. ಗುರುವಿನ ಮಾರ್ಗದರ್ಶನ ವಿದ್ಯಾರ್ಥಿಯ ಸರ್ವೋತೋಮುಖ ಅಭಿವೃದ್ಧಿಗೆ ಪೂರಕ ಎಂದು ಓಂ ಶ್ರೀ ಶಕ್ತಿಗುರುಮಠ, ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಪೂಜ್ಯ ಮುಕ್ತಾನಂದ ಸ್ವಾಮೀಜಿಯವರು ಹೇಳಿದರು. ಅವರು 5 ಎಕ್ಸಲೆಂಟ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ನಡೆದಂತಹ ಶಿಕ್ಷಕರ ದಿನಾಚರಣೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಈ ವಿಷಯವನ್ನು ಪ್ರಸ್ತಾಪಿಸಿದರು.
ಮೂಡಬಿದ್ರೆಯ ಜನಪ್ರಿಯ ಪ್ರಭಾತ್ ಸಿಲ್ಕ್ ಜವಳಿ ಮಳಿಗೆಯ ಮಾಲಿಕರಾದ ಪ್ರಭಾಚಂದ್ರ ಜೈನ್‌ರವರು ಕಾರ್‍ಯಕ್ರಮದ ಮುಖ್ಯ ಅತಿಥಿಯಾಗಿ “ಶೈಕ್ಷಣಿಕವಾಗಿ ಬೆಳೆಯುತ್ತಿರುವ ಮೂಡಬಿದ್ರೆಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಮುಕುಟಮಣಿಯಾಗಿ ಕೀರ್ತಿ ತರುತ್ತಿದ್ದು ಹೆಮ್ಮೆಯ ವಿಷಯ ” ಎಂದು ಹೇಳಿದರು.
ಶಿಕ್ಷಕ ದಿನಾಚರಣೆಯ ಶಿಕ್ಷಣ ಸೇವಾನಿವೃತ್ತಿಯನ್ನು ಪಡೆದ ಪಶುಪತಿ ಶಾಸ್ತ್ರಿ, ನವೀನ್ ಕುಮಾರ್ ಜೈನ್, ಶ್ರೀಮತಿ ಪದ್ಮಜ ಕಾಂಬ್ಳಿ ಮತ್ತು ಶ್ರೀಮತಿ ಪ್ರಫುಲ್ಲ.ಎಂ.ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಈ ಸಂರ್ಧಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪಶುಪತಿ ಶಾಸ್ತ್ರಿ ಯವರು “ಶಿಕ್ಷಕ ವೃತ್ತಿ ಪವಿತ್ರ ವೃತ್ತಿ. ಅದರ ಮೌಲ್ಯ ತಿಳಿಯಬರುವುದು ಸೇವಾ ನಿವೃತ್ತಿಹೊಂದಿದ ಮೇಲೆ. ಜೊತೆಗೆ ನಿವೃತ್ತಿ ಜೀವನ ವೀರಾಮದ ಸಮಯವಾಗದೇ ಜವಬ್ದಾರಿಯ ಸಮಯವಾಗಿರುತ್ತದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ” ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಮಹತ್ವ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸರ್.ಎಂ. ವಿಶ್ವೇಶ್ವರಯ್ಯ ರವರ ಜೀವನದ ಉದಾಹರಣೆಯೊಂದಿಗೆ ತಿಳಿಸಿದರು ಮತ್ತು ಶಿಕ್ಷಕರ ಮಹತ್ವ ಪಾತ್ರ ಜೊತೆಗೆ ಜವಬ್ದಾರಿ ಕುರಿತು ವಿಸ್ಕೃತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್‌ನ ಕಾರ್ಯದರ್ಶಿ ಶ್ರೀಮತಿ. ರಶ್ಮಿತಾ ಜೈನ್ ಸ್ವಾಗತಿಸಿ,ಪ್ರಾಂಶುಪಾಲೆ ಶ್ರೀಮತಿ ದಿವ್ಯಾ ಎಸ್.ನಾಯಕ್ ವಂದಿಸಿದರು. ಆಡಳಿತ ನಿರ್ದೇಶಕ ಡಾ ಬಿ.ಪಿ. ಸಂಪತ್ ಕುಮಾರ್, ಶಾಲಾ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್, ಉಪ ಪ್ರಾಂಶುಪಾಲೆ ಶ್ರೀಮತಿ. ವಿಮಲಾ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು ರಶ್ಮಿತಾ ಶೆಟ್ಟಿ, ಕು ಶಿಕ ಶೆಟ್ಟಿ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.