



ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದೀಗ ಸೊಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ಈ ಸಿನಿಮಾದಲ್ಲಿ ಬೇರೆ ಬೇರೆ ಗೆಟಪ್ಗಳ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ನಿಂದ ಸಿನಿಮಾ ಮೇಲಿನ ಕೌತುಕ ಜಾಸ್ತಿ ಆಗಿದೆ. ‘ಕರಾವಳಿ’ ಟೀಸರ್ನಲ್ಲಿ ನಾಯಕಿ, ನಾಯಕಿ, ವಿಲನ್ ಅಥವಾ ಯಾವುದೇ ಒಂದು ಪಾತ್ರ ಹೈಲೈಟ್ ಆಗಿಲ್ಲ. ಬದಲಿಗೆ, ಒಂದು ಕುರ್ಚಿಯೇ ಕೇಂದ್ರ ಸ್ಥಾನ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ 3 ರೀತಿಯ ಲುಕ್ ಬಹಿರಂಗವಾಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ಬೇರೆ ಬೇರೆ ಗೆಟಪ್ನಲ್ಲಿ ಅವರ ಪೋಸ್ಟರ್ಗಳು ಬಂದಿವೆ. ಈ ಎಲ್ಲ ಕಾರಣಗಳಿಂದಾಗಿ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಈ ವರೆಗೆ ಕರಾವಳಿಯ ಕತೆಯುಳ್ಳ ಸಿನಿಮಾಗೆ ಕರಾವಳಿಯ ಹಿನ್ನೆಲೆಯುಳ್ಳ ಫೇಮಸ್ ನಟರೇ ನಟಿಸುತ್ತಿದ್ದರು. ಆದರೆ ಈಗ ಕರಾವಳಿಯ ಹಿನ್ನೆಲೆಯವರಲ್ಲದ ಪ್ರಜ್ವಲ್ ದೇವರಾಜ್ ಕರಾವಳಿ ಸಿನಿಮಾಗೆ ನಟಿಸುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. https://youtu.be/-nd6AcS55O4?si=dpiCCgOLoJRsH9Rd
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.