



ಕಾರ್ಕಳ: ದುರ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಳ್ಳಾರು ಪೇಟೆಯ ಅಶ್ವಥಕಟ್ಟೆ ಎಂಬಲ್ಲಿ ಮಲಗಿದ್ದ ದನವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ ಘಟನೆ ಜೂ.2 ರಂದು ನಡೆದಿದೆ.
ಕಳ್ಳತನವಾದ ದನವು ತೆಳ್ಳಾರಿನ ಲೊಕೇಶ ಎಂಬವರಿಗೆ ಸೇರಿದ್ದು ,ಕಂದು ಬಣ್ಣದ 4 ವರ್ಷ ಪ್ರಾಯದ ದನವನ್ನು ಮೇಯಲು ಬಿಟ್ಟಿದ್ದು,ವಾಪಸ್ಸು ಬರದೇ ಇದ್ದಾಗ ದನವನ್ನು ಹುಡುಕಿಕೊಂಡು ಹೋದ ಸಮಯದಲ್ಲಿ ಪರಿಚಯದ ನಾರಾಯಣ ಪೂಜಾರಿ ಎಂಬುವವರು ಮುಂಜಾನೆ 1:30 ಗಂಟೆಗೆ ಅಶ್ವಥಕಟ್ಟೆ ಬಳಿ ಮಲಗಿದ್ದ ದನವನ್ನು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಯಾರೋ ಕಳ್ಳರು ಒಂದು ವಾಹನದಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.
ಕಳ್ಳತನವಾದ ದನದ ಮೌಲ್ಯ 10,000/- ರೂಪಾಯಿಯಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.