



ಮಂಗಳೂರು : ದೇವಸ್ಥಾನ ಮಾತ್ರವಲ್ಲ, ಒಟ್ಟು 18 ಧಾರ್ಮಿಕ ಕೇಂದ್ರಗಳಿಗೆ ಅಶ್ಲೀಲ ವಸ್ತು ಎಸೆದು ಅಪಚಾರ ಮಾಡಿದ್ದ ಖತರ್ನಾಕ್ ಕಿಡಿಗೇಡಿಯ ನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ
ಹುಬ್ಬಳ್ಳಿ ಉಣ್ಕಲ್ ಮೂಲದ, ಮಂಗಳೂರಿನ ಕೋಟೆಕಾರು ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ(62) ಬಂಧಿತ. ಡಿ.27ರ(ಸೋಮವಾರ) ರಾತ್ರಿ ಅತ್ತಾವರ ಮಾರ್ನಮಿಕಟ್ಟೆಯ ಕೊರಗಜ್ಜನ ಕಟ್ಟೆಗೆ ಅಶ್ಲೀಲ ವಸ್ತು ಎಸೆದು ಕಿಡಿಗೇಡಿ ಅಪಚಾರವೆಸಗಿದ್ದ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುತ್ತಿದ್ದಂತೆ ದೇವದಾಸ್ ದೇಸಾಯಿ ಸಿಕ್ಕಿಬಿದ್ದಿದ್ದಾನೆ. ಈತ ಮಾರ್ನಮಿಕಟ್ಟೆಯ ಕೊರಗಜ್ಜನ ದೇವಸ್ಥಾನ ಮಾತ್ರವಲ್ಲ, ಇದುವರೆಗೂ ಒಟ್ಟು 18 ಧಾರ್ಮಿಕ ಕೇಂದ್ರಗಳ ಮೇಲೂ ಇಂತಹದ್ದೇ ನೀಚ ಕೆಲಸ ಮಾಡಿದ್ದಾನೆ. ಅದರಲ್ಲಿ ಕೊರಗಜ್ಜನ ಕಟ್ಟೆ, ದೇವಸ್ಥಾನ, ನಾಗನ ಕಟ್ಟೆ, ದರ್ಗಾ ಕೂಡ ಸೇರಿದೆ.
ಪಾಂಡೇಶ್ವರ ಠಾಣೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.