logo
WhatsApp Image 2026-04-02 at 14.46.04.jpeg
hindalco everlast.jpeg

ಅಮೆರಿಕದಲ್ಲಿ ಭೀಕರ ಸುಂಟರಗಾಳಿ: 21 ಮಂದಿ ಸಾವು

ಟ್ರೆಂಡಿಂಗ್
share whatsappshare facebookshare telegram
2 Apr 2023
post image

ವಾಷಿಂಗ್ಟನ್(ಅಮೆ್ಇಕ): ಚಂಡಮಾರುತ ಹಾಗೂ ಭೀಕರ ಸುಂಟರಗಾಳಿಗೆ ಕನಿಷ್ಟ 21 ಮಂದಿ ಬಲಿಯಾಗಿದ್ದಾರೆ.

ದಿಢೀರ್ ಹವಾಮಾನ ಬದಲಾವಣೆ ಪರಿಣಾಮ ಶುಕ್ರವಾರ ಮುಂಜಾನೆಯಿಂದ ಶನಿವಾರದವರೆಗೆ ಯುನೈಟೆಡ್ ಸ್ಟೇಟ್ಸ್‌ನ ದಕ್ಷಿಣ ಮತ್ತು ಮಧ್ಯಪಶ್ಚಿಮ ಭಾಗಗಳಿಗೆ ಅಪಾಯಕಾರಿ ಚಂಡಮಾರುತ ಮತ್ತು ಸುಂಟರಗಾಳಿ ಅಪ್ಪಳಿಸಿದೆ.

ಹವಾಮಾನ ವೈಪರೀತ್ಯದಿಂದ ಶುಕ್ರವಾರ ಮತ್ತು ಶನಿವಾರದಂದು ರಾಜ್ಯಾದ್ಯಂತ 60 ಕ್ಕೂ ಹೆಚ್ಚು ಕಡೆ ಸುಂಟರಗಾಳಿ ಬೀಸಿರುವ ಕುರಿತು ವರದಿಯಾಗಿದೆ. ಶುಕ್ರವಾರ ಮಧ್ಯಾಹ್ನ ಅರ್ಕಾನ್ಸಾಸ್‌ನ ಲಿಟಲ್ ರಾಕ್ ಮತ್ತು ಇತರೆಡೆ ಸುಂಟರಗಾಳಿ ಅಪ್ಪಳಿಸಿದ್ದು, ಹಲವು ಮನೆಗಳು‌ ಹಾನಿಗೀಡಾಗಿವೆ. ಭೀಕರ ಸುಂಟರಗಾಳಿ ಹಿನ್ನೆಲೆಯಲ್ಲಿ ಅರ್ಕಾನ್ಸಾಸ್‌ನಲ್ಲಿ ಶುಕ್ರವಾರ ಮಧ್ಯಾಹ್ನ ರಾಜ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಉತ್ತರ ಲಿಟಲ್ ರಾಕ್‌ನಲ್ಲಿ ಒಬ್ಬರು ಮತ್ತು ವೈನ್ನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉತ್ತರ ಇಲಿನಾಯ್ಸ್‌ನ ಬೆಲ್ವಿಡೆರೆಯಲ್ಲಿನ ಥಿಯೇಟರ್‌ನಲ್ಲಿ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಥಿಯೇಟರ್‌ನಲ್ಲಿ ಒಟ್ಟು 260 ಜನರಿದ್ದರು. ಈ ಪೈಕಿ 28 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲ್ಲಿವಾನ್ ಕಂಟ್ರಿ, ಇಂಡಿನಲ್ಲಿ, ಶೆರ್ಮನ್‌ನ ಪೂರ್ವಕ್ಕೆ ಸರಿಸುಮಾರು 150 ಮೈಲುಗಳಷ್ಟು ದೂರ ಸುಂಟರಗಾಳಿ ಬೀಸಿದ್ದು, ಈ ಭಾಗದಲ್ಲಿ ಮೂವರು ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್, ಇಲಿನಾಯ್ಸ್, ಇಂಡಿಯಾನಾ ಮತ್ತು ಟೆನ್ನೆಸ್ಸೀ ಮಾತ್ರವಲ್ಲದೇ ವಿಸ್ಕಾನ್ಸಿನ್, ಅಯೋವಾ ಮತ್ತು ಮಿಸ್ಸಿಸ್ಸಿಪ್ಪಿಯಾದ್ಯಂತ ಸುಂಟರಗಾಳಿ ಭಾರಿ ನಷ್ಟ ಉಂಟುಮಾಡಿದೆ. ಅಲಬಾಮಾ ಮತ್ತು ಜಾರ್ಜಿಯಾದ ಭಾಗಗಳಿಗೆ ಸಹ ಎಚ್ಚರಿಕೆ ನೀಡಲಾಗಿದೆ.

ಕಳೆದ ವಾರ ಅಮೆರಿಕದ ದಕ್ಷಿಣ ರಾಜ್ಯ ಮಿಸಿಸಿಪ್ಪಿಯ ರೋಲಿಂಗ್ ಫೋರ್ಕ್ನಲ್ಲಿ ಬೀಸಿದ ಸುಂಟರಗಾಳಿಗೆ 25 ಮಂದಿ ಮೃತಪಟ್ಟಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.