


ಕಾರ್ಕಳ: ಪರಿಸರ ಸಂರಕ್ಷಣೆ ಹಾಗೂ ಗಿಡಗಳನ್ನು ನೆಟ್ಟು ಪೋಷಿಸುವ ಉದ್ದೇಶದಿಂದ ರೋಟರಿ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಂಡಿರುವ ‘ಧನ್ಯವಾದ್’ ವೃಕ್ಷ ಸಂವರ್ಧನಾ ಅಭಿಯಾನದ ಅಂಗವಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕ್ಲಬ್‌ನ ಮಾರ್ಗದರ್ಶಕರಾದ ರೊ. ಡಾ. ಭರತೇಶ್ ಆದಿರಾಜ್ ಅವರ ನೇತೃತ್ವದಲ್ಲಿ, ಅಧ್ಯಕ್ಷ ರೊ. ಮಂಜುನಾಥ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ಹಾಗೂ ಪೂರ್ವಾಧ್ಯಕ್ಷ ರೊ. ಸುರೇಂದ್ರ ನಾಯಕ್ ಅವರ ಸಲಹೆ ಮತ್ತು ರೊ. ಸುಜಯ್ ಅವರ ಸಹಕಾರದೊಂದಿಗೆ ಮಿಯಾರು ಪರಿಸರದಲ್ಲಿರುವ, ಕ್ಲಬ್‌ನ ಪ್ರಾಯೋಜಕತ್ವದಲ್ಲಿರುವ ‘ರೋಟರಿ ಕೆರೆಯ ಇಕ್ಕೆಲಗಳಲ್ಲಿ 50ಕ್ಕೂ ಹೆಚ್ಚು ಔಷಧೀಯ ಹಾಗೂ ಉಪಯುಕ್ತ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ರೊ. ಉಪೇಂದ್ರ ವಾಗ್ಲೆ, ರೊ. ಚಿರಾಗ್ ರಾವ್, ರೊ. ಸುಧೀರ್ ಕಾಮತ್, ರೊ. ಪ್ರಮೋದ್ ಶೆಟ್ಟಿ ಹಾಗೂ ರೊ. ಗಣೇಶ್ ಬರ್ಲಾಯ ಅವರು ಭಾಗವಹಿಸಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ಶ್ರಮವಹಿಸಿ ವ್ಯವಸ್ಥಾಪನೆ ಮಾಡಿದ ರೊ. ಸುರೇಂದ್ರ ನಾಯಕ್ ಹಾಗೂ ಕಾಮಗಾರಿಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ ರೊ. ಸುಜಯ್ ಅವರಿಗೆ ಕ್ಲಬ್ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.