logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

*ಮಲೆಕುಡಿಯ ಸಂಘಟನೆಯ ಕಾರ್ಯ ವೈಖರಿ ಶ್ಲಾಘನೀಯ:* *ಶ್ರೀ.ವಿಖ್ಯಾತನಂದ ಸ್ವಾಮೀಜಿ

ಟ್ರೆಂಡಿಂಗ್
share whatsappshare facebookshare telegram
3 Jan 2023
post image

ಕಾರ್ಕಳ:

ಸಮಾಜದಲ್ಲಿ ಮಲೆಕುಡಿಯ ಸಂಘಟನೆಯು ಅತ್ಯಂತ ಸಧೃಡ ವಾಗಿ ಬೆಳೆದಿದ್ದರ ಪರಿಣಾಮವಾಗಿ ಶೈಕ್ಷಣಿಕ ಆರ್ಥಿಕ ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯಾಗಲು ಸಾಧ್ಯವಾಗಿದೆ. ಸಮುದಾಯದ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕೆಲಸವನ್ನು ಮಾಡಬೇಕು ಎಂದು ಮಾಳ ಕೂಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 31 ರಂದು ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಇದರ ಸಹಯೋಗದೊಂದಿಗೆ ಸಮುದಾಯ ಭವನ ಉದ್ಘಾಟನೆ ಮತ್ತು ದಶಮಾನೋತ್ಸವ ಹಾಗೂ ಕ್ರೀಡೋತ್ಸವ ಪ್ರಯುಕ್ತ ಸ್ವಜಾತಿ ಬಾಂಧವರ ರಾಷ್ಟ್ರ ಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪೀಠಾಧಿಪತಿ ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾ ಸಂಸ್ಥಾನ ರೇಣುಕಾ ಪೀಠ ನಾರಾಯಣ ಗುರು ಮಠ ಸೋಲೂರು ಬೆಂಗಳೂರು ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಕಬಡ್ಡಿ ಈ ಮಣ್ಣಿನ ಕ್ರೀಡೆ ಸನಾತನ ಸಂಸ್ಕೃತಿಯ ಪ್ರತೀಕ ಮಲೆಕುಡಿಯ ಸಂಘಟನೆಯು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಈ ಭಾಗದಲ್ಲಿ ಆಯೋಜಿಸಿರುವುದು ಅತ್ಯಂತ ಹೆಮ್ಮೆ ತಂದಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಹೆಬ್ರಿ ತಾಲೂಕು ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಮೇಶ್ ಕುಮಾರ್ ಅವರು ಮಾತನಾಡಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಈ ನೆಲದಲ್ಲಿ ಆಡಿದ್ದೇವೆ ಅನ್ನುವ ತೃಪ್ತಿ ಎಲ್ಲರಲ್ಲಿಯೂ ಇರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ ಪ್ರಮೋದ್ ಮಧ್ವರಾಜ್ ಮಾತನಾಡಿ ಅರಣ್ಯ ಭಾಗದಲ್ಲಿ ಹೆಚ್ಚಾಗಿ ನೆಲೆಯೂರಿರುವ ಆದಿವಾಸಿ ಮಲೆಕುಡಿಯರಿಗೆ ಸರಕಾರ ಜನಪ್ರತಿನಿಧಿಗಳು ಸಹಕಾರ ನೀಡದೇ ಹೋದರೆ ಅದಕ್ಕಿಂತ ದುರ್ದೈವ ಮತ್ತೊಂದಿಲ್ಲ ಹಾಗಾಗಿ ನಾನು ಸರ್ಕಾರದಿಂದ ಸಮುದಾಯದಕ್ಕೆ ಧಕ್ಕಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನಿಮ್ಮ ಜೊತೆಗಿದ್ದು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ಮುಖ್ಯೋಪಾಧ್ಯಯರಾದ ಕೃಷ್ಣ ಮೊಯ್ಲಿಯವರು ಮಾತನಾಡಿ ಮಲೆಕುಡಿಯರು ಅನಾದಿ ಕಾಲದಿಂದಲೂ ದೇವಸ್ಥಾನ ದೈವಸ್ಥಾನಗಳಲ್ಲಿ ಸೇವೆಯನ್ನು ಮಾಡುತ್ತಾ ಬಂದಿದ್ದು ಇದರ ಫಲವಾಗಿ ದೇವರ ಗುಡಿಯನ್ನೆ ಹೋಲುವ ಭವ್ಯ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು. ಈ ಭಾಗದ ನಮಗೆಲ್ಲರಿಗೂ ಬಹಳ ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷರಾದ ಗಂಗಾಧರ ಗೌಡ ಈದು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿಯೂ ಸಹ ಸಂಘದ ಕಾರ್ಯಚಟುವಟಿಕೆಗೆ ಸಹಕಾರವನ್ನು ಕೋರಿದರು.

ಈ ಸಂದರ್ಭ ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ 32 ಮಂದಿಗೆ ಸನ್ಮಾನವನ್ನು ನೆರವೇರಿಸಲಾಯಿತು. ಪಂದ್ಯಾಟದಲ್ಲಿ ಒಟ್ಟು 32 ಪರುಷ ಹಾಗೂ 9 ಮಹಿಳಾ ಮತ್ತು 2 ಬಾಲಕರ 2 ಬಾಲಕಿಯರ ತಂಡಗಳು ಭಾಗವಹಿಸಿದ್ದವು.

ವೇದಿಕೆಯಲ್ಲಿ ರಾಜ್ಯ ಮಲೆಕುಡಿಯ ಸಂಘದ ಉಪಾಧ್ಯಕ್ಷರುಗಳಾದ ವಸಂತಿ ಕುತ್ಲೂರು, ಶ್ರೀ ವೆಂಕಟೇಶ್ ಬೆಂಗಳೂರು,ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ ಪೂರ್ವ ಕಾರ್ಯದರ್ಶಿ ಶ್ರೀ ದಯಾನಂದ ಮಡಿಕೇರಿ, ಅಖಿಲ ಕೇರಳ ಮೆಲಕುಡಿ-ಕುಡಿಯ ಸೇವಾ ಸಂಘ (ರಿ‌.) ಸಂಚಾಲಕರಾದ ಶ್ರೀ ಶಂಕರ ಗೌಡ ಕಾಸರಗೋಡು ಉಪಸ್ಥಿತರಿದ್ದರು.

ಶ್ರೀಮತಿ ಪುಷ್ಪ ಶ್ರೀಧರ್ ಗೌಡ ನಿರೂಪಿಸಿದರು. ಅಮಿತಾ ಹಾಗೂ ಸುಜಾತ ಕಬ್ಬಿನಾಲೆ ಪ್ರಾರ್ಥಿಸಿ, ಶ್ರೀಧರ ಗೌಡ ಈದು ಸ್ವಾಗತಿಸಿ, ಶ್ರೀಮತಿ ಸರೋಜಿನಿ ಧನ್ಯವಾದವಿತ್ತರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.