logo
WhatsApp Image 2026-04-02 at 14.46.04.jpeg
hindalco everlast.jpeg

ಭಾರತದ ಧಾರ್ಮಿಕ ಸ್ವಾತಂತ್ರ್ಯ ಟೀಕಿಸಿದ್ದ ಅಮೇರಿಕಕ್ಕೆ ತಕ್ಕ ಉತ್ತರ ಕೊಟ್ಟ ಕೇಂದ್ರ

ಟ್ರೆಂಡಿಂಗ್
share whatsappshare facebookshare telegram
17 May 2023
post image

ನವದೆಹಲಿ: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿಮರ್ಶೆ ಮಾಡಿದ್ದ ಅಮೇರಿಕಾದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಆ ವರದಿಯನ್ನು ಪ್ರೇರಿಪಿತ ಮತ್ತು “ಪಕ್ಷಪಾತ”ದ ವರದಿ ಎಂದು ಹೇಳಿದೆ.

ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಅಮೇರಿಕಾ ತನ್ನ ವರದಿಯಲ್ಲಿ ಟೀಕಿಸಿತ್ತು. ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಾಚಿ ಈ ಬಗ್ಗೆ ಮಾತನಾಡಿದ್ದು, ಇಂತಹ ವರದಿಗಳು ತಪ್ಪು ಮಾಹಿತಿ ಹಾಗೂ ದೋಷಪೂರಿತ ತಿಳುವಳಿಕೆಗಳಿಂದ ಆಧರಿಸಲ್ಪಟ್ಟಿವೆ ಎಂದು ಹೇಳಿದ್ದಾರೆ.

ಅಮೇರಿಕ ಪ್ರಕಟಿಸಿರುವ ವಾರ್ಷಿಕ ವರದಿ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಪಾದಿತ ದಾಳಿಗಳನ್ನು ಪಟ್ಟಿ ಮಾಡಿದೆ ಮತ್ತು ಅಂತಹ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೇರಿಕದ ಸ್ಟೇಟ್ ಡಿಪಾರ್ಟ್ಮೆಂಟ್ 2022 ರ ವರದಿಯ ಬಿಡುಗಡೆಯ ಬಗ್ಗೆ ನಮಗೆ ತಿಳಿದಿದೆ. ಅಂತಹ ವರದಿಗಳು ತಪ್ಪು ಮಾಹಿತಿ ಮತ್ತು ದೋಷಯುಕ್ತ ತಿಳುವಳಿಕೆಯನ್ನು ಆಧರಿಸಿರುವುದು ವಿಷಾದನೀಯ” ಎಂದು ಬಾಗ್ಚಿ ಹೇಳಿದರು.

ವರದಿ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಬಾಗ್ಚಿ ಪ್ರತಿಕ್ರಿಯಿಸಿ, “ಅಮೇರಿಕಾದ ಕೆಲವು ಅಧಿಕಾರಿಗಳ ಪ್ರೇರೇಪಿತ ಮತ್ತು ಪಕ್ಷಪಾತದ ವ್ಯಾಖ್ಯಾನ ಈ ವರದಿಗಳ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹಾಳುಮಾಡುತ್ತದೆ” ಎಂದು ಅವರು ಹೇಳಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.