



ಬೆಂಗಳೂರು : ಟೆಕ್ ಸ್ಟಾರ್ಟ್ಅಪ್ ಸಂಸ್ಥಾಪಕ ಹಾಗೂ ಸಿಇಒ ಬ್ರಿಜ್ ಸಿಂಗ್ ಭಾರವಾದ ಹೃದಯದಿಂದ ಬೆಂಗಳೂರಿನಿಂದ ಮತ್ತೆ ಅಮೆರಿಕಾಗೆ ತೆರಳಿದ್ದಾರೆ.
ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿ ನೋಂದಣಿ ಮಾಡಲು ಕಳೆದ 2 ತಿಂಗಳಿನಿಂದ ಸತತ ಪ್ರಯತ್ನ ಪಟ್ಟ ಬ್ರಿಜ್ ಸಿಂಗ್ ಕೊನೆಗೂ ಕಂಪನಿ ರಿಜಿಸ್ಟರ್ ಆಗಲೇ ಇಲ್ಲ. ಹೀಗಾಗಿ ಮತ್ತೆ ಅಮೆರಿಕಾಗೆ ತೆರಳಿದ್ದಾರೆ. ಈ ವೇಳೆ ತಮಗಾಗಿರುವ ನೋವನ್ನು ಹಂಚಿಕೊಂಡಿದ್ದಾರೆ.
ಬ್ರಿಜ್ ಸಿಂಗ್ ತಂತ್ರಜ್ಞಾನ, ಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಹಾಗೂ ಭಾರತದಲ್ಲಿ ಕಳೆದ 18 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಅನುಭವದಿಂದ ಇದೀಗ ಬೆಂಗಳೂರಿನಲ್ಲಿ ಹೊಸ ಸ್ಟಾರ್ಟ್ ಅಪ್ ಕಂಪನಿ ತೆರೆಯಲು ಮುಂದಾಗಿದ್ದರು.ಆದರೆ ಬ್ರಿಜ್ ಸಿಂಗ್ ಪ್ರಯತ್ನ ಕೈಗೂಡಿಲ್ಲ. ಎರಡು ತಿಂಗಳಿಂದ ಬೆಂಗಳೂರಲ್ಲಿ ಕಂಪನಿ ರಿಡಿಸ್ಟರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮರಳಿ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಬ್ರಿಜ್ ಸಿಂಗ್, ತಮ್ಮ ನೋವು ಹಂಚಿಕೊಂಡಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.