logo
WhatsApp Image 2026-04-02 at 14.46.04.jpeg
hindalco everlast.jpeg

ನೀರಿನ ತೊಟ್ಟಿಗೆ ಮಗು ಬಿದ್ದು ಮೃತ್ಯು..!

ಟ್ರೆಂಡಿಂಗ್
share whatsappshare facebookshare telegram
24 Dec 2023
post image

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಆಟವಾಡುತ್ತಾ ಮಗುವೊಂದು ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಇಟ್ಟಿಗೆ ಭಟ್ಟಿಯ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಾನ್ವಿತಾ ಮೃತಪಟ್ಟ ದುರ್ದೈವಿ. ಮಾನ್ವಿತಾ ತಾಯಿ ರೂಪಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸಗಾರರಾಗಿದ್ದರು. ಮಾನ್ವಿತಾಳಿಗೆ ಜ್ವರ ಇದ್ದ ಕಾರಣಕ್ಕೆ ರೂಪಾ ಮಗಳನ್ನು ಜತೆಗೆ ಕರೆದುಕೊಂಡು ಕೆಲಸಕ್ಕೆ ಬಂದಿದ್ದರು. ಮಾನ್ವಿತಾಳಿಗೆ ಔಷಧಿ ಕೊಟ್ಟು ಅಲ್ಲೆ ಇದ್ದ ಅಜ್ಜನ ಬಳಿ ಆಟವಾಡಲು ಬಿಟ್ಟು, ರೂಪಾ ತಮ್ಮ ಕೆಲಸಕ್ಕೆ ಮುಂದಾಗಿದ್ದಾರೆ. ಈ ವೇಳೆ ಆಟವಾಡುತ್ತಾ ನೀರಿನ ತೊಟ್ಟಿ ಬಳಿ ಬಂದು ಆಕಸ್ಮಿಕವಾಗಿ ಮಾನ್ವಿತಾ ಬಿದ್ದಿದ್ದಾಳೆ. ತುಂಬಾ ಸಮಯದವರೆಗೆ ಮಗು ಕಾಣದಿದ್ದಾಗ ಅನುಮಾನಗೊಂಡು ತೊಟ್ಟಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಮಾನ್ವಿತಾ ಮೃತಪಟ್ಟಿದ್ದಾಳೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.