



ಮಂಗಳೂರು:
ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಎಂದು ಪರಿಗಣಿಸಲಾದ ಹೆಚ್ಚು ಕಡಿಮೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕ್ಲಾಕ್ ಟವರ್ ಕೊನೆಗೂ ಉಪಯೋಗಕ್ಕೆ ಬಂತು ಎಂದು ಕಡಲನಗರಿಯ ನಾಗರಿಕರು ಆಡಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಕೂಡ ಉಂಟು. ಹಾಗಾದರೆ ಇದೇನು ಅಂತಹ ಮಹಾ ಕಾರಣ ಎಂಬ ಕುತೂಹಲ ನಿಮಗಿದೆಯೇ? ಮುಂದಕ್ಕೆ ಓದಿ... ಹಳೆಯ ಕ್ಲಾಕ್ ಟವರ್ ತೆರವುಗೊಳಿಸಿ ದಶಕಗಳೇ ಉರುಳಿದ ಬಳಿಕ ಅದೇ ಜಾಗದಲ್ಲಿ ಮತ್ತೆ ಕ್ಲಾಕ್ ಟವರ್ ನಿರ್ಮಿಸುವ ಬಗ್ಗೆ ಮಂಗಳೂರಿನ ನಾಗರಿಕರ ತಂಡವೊಂದು ವಿರೋಧ ವ್ಯಕ್ತಪಡಿಸಿತ್ತು. ಪಾಲಿಕೆಯಲ್ಲಿ ಅಂದು ಪ್ರತಿಪಕ್ಷದ ಸಾಲಿನಲ್ಲಿದ್ದ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸಿತ್ತು. ಆದರೆ ಹಠಕ್ಕೆ ಬಿದ್ದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಥಮ ಕಾಮಗಾರಿಯಾಗಿ ಕ್ಲಾಕ್ ಟವರ್ ಕೈಗೆತ್ತಿಕೊಳ್ಳಲಾಯಿತು. ಇದೀಗ ಕ್ಲಾಕ್ ಟವರ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಜನರಿಗೆ ಟೈಮ್ ನೋಡಲು ಈ ಗಡಿಯಾರ ಗೋಪುರ ಬೇಕಿಲ್ಲದಿದ್ದರೂ ಬೇರೆ ರೀತಿಯಲ್ಲಿ ಅದು ಇಂದು ಉಪಯೋಗಕ್ಕೆ ಬಂದಿದೆ.
ಅದೇನೆಂದರೆ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕ್ಲಾಕ್ ಟವರ್ ನ ಕಾರಂಜಿ ನೀರಿನಲ್ಲಿ ಹುಟ್ಟುಡುಗೆಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಪಬ್ಲಿಕ್ ನಳ್ಳಿಗಳು ಇಲ್ಲದ ಈ ಕಾಲದಲ್ಲಿ ಸಿಕ್ಕಿದ್ದು ಅವಕಾಶ ಎಂಬಂತೆ ಮಾನಸಿಕ ಅಸ್ವಸ್ಥ ವ್ಯಕ್ತಿ ಇಲ್ಲಿ ಜಳಕ ಮಾಡಿದ್ದಾರೆ. ನಗರದಲ್ಲಿ ಸುತ್ತುವ ಜನರು ಈ ದೃಶ್ಯವನ್ನು ಕಂಡು ತೆಪ್ಪಗೆ ಮುಂದು ಸರಿದಿದ್ದಾರೆ. ಅದೇನೆಂದರೆ, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕ್ಲಾಕ್ ಟವರ್ ನ ಕಾರಂಜಿ ನೀರಿನಲ್ಲಿ ಹುಟ್ಟುಡುಗೆಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಪಬ್ಲಿಕ್ ನಳ್ಳಿಗಳು ಇಲ್ಲದ ಈ ಕಾಲದಲ್ಲಿ ಸಿಕ್ಕಿದ್ದು ಅವಕಾಶ ಎಂಬಂತೆ ಮಾನಸಿಕ ಅಸ್ವಸ್ಥ ವ್ಯಕ್ತಿ ಇಲ್ಲಿ ಜಳಕ ಮಾಡಿದ್ದಾರೆ. ನಗರದಲ್ಲಿ ಸುತ್ತುವ ಜನರು ಈ ದೃಶ್ಯವನ್ನು ಕಂಡು ತೆಪ್ಪಗೆ ಮುಂದು ಸರಿದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.