



ನೇಮಿರಾಜ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಆಹಾ ಮೂರು ವರ್ಷಗಳ ಹಿಂದೆ ಜಾಗದ ಪರಿಚಯವಿಲ್ಲದೆ ಮುಂದಿನ ಭವಿಷ್ಯ ರೂಪಿಸುವುದರ ಸಲುವಾಗಿ ಎಲ್ಲೋ ಇದ್ದ ಹಲವಾರು ಯುವಕ ಯುವತಿಯರು ಸೇರಿಕೊಂಡ ಜಾಗವೇ ನಮ್ಮ ವಿದ್ಯಾ ದೇಗುಲ . ಎಂಪಿಎಂ ದಿನಗಳು ಕಳೆದಂತೆ ಪರಿಚಯವಿಲ್ಲದೆ ನಾವು ಸ್ನೇಹಿತರಾದೆವು ಅದು ಯಾವ ಸಂದರ್ಭದಲ್ಲಿ ಬೆಳೆಯಿತು ಗೊತ್ತಿಲ್ಲ ಆ ಸ್ನೇಹ ಆಲದ ಮರದ ಹಾಗೆ ಬೆಳೆದು ನಮ್ಮ ಸ್ನೇಹ ಬಳಗ ಬೆಳೆದು ನಿಂತಿದೆ..
ಮುಂದೆ ಹೋದಂತೆ ಕೀಟಲೆಗಳು ಮೋಜು ಮಸ್ತಿ ಮಾಡುತ್ತಾ ಶಿಕ್ಷಕರನ್ನು ಮನಸ್ಸಿನಲ್ಲಿ ಬಯ್ಯುತ್ತಾ ತರಗತಿಯಲ್ಲಿ ಇರಲು ಇಷ್ಟವಿಲ್ಲದಿದ್ದರು ಗೊಣಗುತ್ತಾ ಹಾಜರಾತಿಗೆ ಜೈ ಎನ್ನುತ್ತಾ ತರಗತಿಯಲ್ಲಿ ಕಣ್ಣು ಬಿಟ್ಟು ನಿದ್ದೆ ಮಾಡಿ ಕಾಲ ಕಳೆದು ಇಷ್ಟೆಲ್ಲ ಹೇಗೆ ಮಾಡಿದೆ ಎಂದು ಯೋಚನೆ ಮಾಡಲು ಸಮಯವಿಲ್ಲದೆ ಕಾಲೇಜಿನ ಕೊನೆಯ ದಿನ ಬಂದೇ ಬಿಟ್ಟಿತು.
ಹಿಂದೆ ನಡೆದ ಘಟನೆಗಳು ಎಲ್ಲವೂ ನೆನೆದರೆ ಕಣ್ಣಿನಲ್ಲಿ ನೀರು ಜಿನುಗುತ್ತಿದೆ. ಕಾಲೇಜು ಜೀವನದ ಕೊನೆ ದಿನಗಳು ಎಂದು ಹೇಳಲು ಮನಸ್ಸಿಗೆ ಇಷ್ಟವಿಲ್ಲವಾದರೂ ಮನಸ್ಸಿಗೆ ಭಾರ ಹಾಕಿ ಕೊಂಡು ಮುಂದಿನ ಭವಿಷ್ಯದ ಗುರಿಗಾಗಿ ಸ್ನೇಹಿತರು ಶಿಕ್ಷಕರು ಹಾಗೆ ಕಾಲೇಜಿನ ಸುಂದರ ವಾತಾವರಣವನ್ನು ಬಿಟ್ಟು ಹೋಗುವುದು ಅನಿವಾರ್ಯ...
ಗಟ್ಟಿ ಮನಸ್ಸಿನಿಂದ ಹಿಡಿದು ಎಲ್ಲರಿಗೂ ಧನ್ಯವಾದ ತಿಳಿಸಿ ಮುಂದಿನ ಜೀವನಕ್ಕೆ ಸಾಗೋಣ ಮುಂದೊಂದು ದಿನ ಯಶಸ್ಸಿನತ್ತ ದಾಪುಗಾಲಿಡೋಣ ...
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.