



ಕಾರ್ಕಳ: ದಿ. ಗೋಪಾಲ್ ಭಂಡಾರಿ ಯವರ ಕಛೇರಿಗೆ ಕಾಂಗ್ರೆಸ್ ಅಭ್ಯರ್ಥಿ ಉದಯ್ ಕುಮಾರ್ ಶೆಟ್ಟಿ ಭೇಟಿ ನೀಡಿ ಗೋಪಾಲ ಭಂಡಾರಿ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ ಭಾವುಕರಾದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಲ್ಲಿ ಕಾಂಗ್ರೆಸ್ ಪಕ್ಷ ಬಲಪ್ರದರ್ಶನಕ್ಕೆ ತಾಲೀಮು ಆರಂಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕೆಪಿಸಿಸಿ ನೀಡಿರುವ ಬಿ ಫಾರಂ ಪಡೆದುಕೊಂಡು ಮುನ್ನುರಕ್ಕೂ ಹೆಚ್ಚು ವಾಹನಗಳ ಜಾಥದ ಮೂಲಕ ಮುಂಡ್ಕೂರಿನಿಂದ ಬೆಳ್ಮಣ್ ನಿಟ್ಟೆ ಕಾರ್ಕಳ ಮಾರಿಗುಡಿ , ಗೊಮ್ಮಟ ಬೆಟ್ಟ ಮೂಲಕ ಸಾಗಿ ಕಾರ್ಕಳದ ತಾಲೂಕು ಕಛೇರಿ ಬಳಿ ಇರುವ ತಮ್ಮ ಕಚೇರಿವರೆಗೆ ಕರೆದುಕೊಂಡು ಬರಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನ ದಲ್ಲಿ ನಾನು ನಡೆಯುವೆ , ಪಕ್ಷಕ್ಕೆ ನಿಷ್ಠಾವಂತ ನಾಗಿ ದುಡಿಯುವೆ ಎಂದರು
ಒಗ್ಹಟಿನ ಬಲ ಪ್ರದರ್ಶಿಸಿದ ಮುಖಂಡರು : ಟಿಕೆಟ್ ಹಂಚಿಕೆಯಲ್ಲಿ ಗೊಂದಲದಲ್ಲಿದ್ದ ಕಾಂಗ್ರೆಸ್ ಪಕ್ಷದ ಟಿಕೆಟ್ವ್ ಆಕಾಂಕ್ಷಿಗಳಾದ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಡಿ ಆರ್ ರಾಜು , ಮುನಿಯಾಲು ಉದಯ ಕುಮಾರ್ ಶೆಟ್ಟಿ ಒಗ್ಗಟ್ಟು ಪ್ರದರ್ಶಿಸಿದರು. ಬಳಿಕ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗು ಟಿಕೆಟ್ ಅಕಾಂಕ್ಷಿ ಮಂಜುನಾಥ್ ಪೂಜಾರಿ ಹಾಗೂ ನೀರೆ ಕೃಷ್ಣ ಶೆಟ್ಟಿ ಯವರ ಮನೆಗೆ ಬೇಟಿ ನೀಡಲಿದ್ದಾರೆ ಎಂದು ತಿಳಿಸಿದರು
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶೇಖರ್ ಮಡಿವಾಳ ,ಬ್ಲಾಕ್ ಕಾಂಗ್ರೆಸ್ ಸದಾಶಿವ ದೇವಾಡಿಗ , ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ , ಜಿಲ್ಲಾ ಮುಖಂಡ ಅಶೋಕ್ ಕೊಡವೂರ್ , ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದರಾವ್ ಉಪಸ್ಥಿತರಿದ್ದರು.
ನಾನು ಭಂಡಾರಿಯವರಿಗೂ ಹಾಗು ವೀರಪ್ಪ ಮೊಯ್ಲಿ ಯವರಿಗೂ ತಪ್ಪು ಎಸಗಿಲ್ಲ, ಅದರೆ ಜನರಿಗೆ ತಪ್ಪು ಸಂದೇಶ ರವಾನೆ ಯಾಗಿದೆ , ಇನ್ನು ಮುಂದೆ ಯಾವುದೆ ತಪ್ಪು ಅಗದಂತೆ ನಡೆದುಕೊಳ್ಳುವೆ ಎಂದು ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.