logo
WhatsApp Image 2026-04-02 at 14.46.04.jpeg
hindalco everlast.jpeg

ಓದುವ ಸಂಸ್ಕೃತಿ ಜೀವಂತವಾಗಿದೆ -ಸಚಿವ ಸುನಿಲ್ ಕುಮಾರ್

ಟ್ರೆಂಡಿಂಗ್
share whatsappshare facebookshare telegram
17 Oct 2021
post image

ಕಾರ್ಕಳ: ಪುಸ್ತಕ ಓದುವ ಹವ್ಯಾಸ ಕಡಿಮೆಯಾದರೂ, ಇದೀಗ ಮೊಬೈಲ್ ಮೂಲಕವೂ ಸಾಹಿತ್ಯವನ್ನು ಓದುವವರಿದ್ದಾರೆ. ಹೀಗಾಗಿ ಓದುವ ಸಂಸ್ಕೃತಿ ಜೀವಂತವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.               

ಇಲ್ಲಿನ ಹೊಟೇಲ್ ಪ್ರಕಾಶ್‌ನ ಉತ್ಸವ ಸಭಾಂಗಣದಲ್ಲಿ ದಿ. ಪ್ರೊ.ಎಂ ರಾಮಚಂದ್ರ ವೇದಿಕೆಯಲ್ಲಿ ಸಾಹಿತ್ಯ ಸಂಘದ ಬೆಳ್ಳಿಹಬ್ಬ ವರ್ಷಾಚರಣೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ಒಂದು ರಾಜ್ಯದ, ಊರಿನ ಅಭಿವೃದ್ಧಿ ಅಂದರೆ ಅಲ್ಲಿನ ಕಟ್ಟಡ, ರಸ್ತೆ, ಸೇತುವೆ ಮಾತ್ರವಲ್ಲ. ಅಲ್ಲಿ ಕಲೆ, ಸಂಸ್ಕೃತಿ ಬೆಳೆಸುವ ಕೆಲಸ ನಡೆಯಬೇಕು. ಈ ದೃಷ್ಟಿಯಲ್ಲಿ ಸಾಹಿತ್ಯ ಸಂಸ್ಕೃತಿ ಬೆಳೆಸಲು ಮೈಸೂರು ಮಹಾರಾಜರು ನೀಡಿದ ಕೊಡುಗೆ ಅನನ್ಯವಾದುದು ಎಂದರು. 

   ಯುವ ಸಾಹಿತಿಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿರುಚಿ ಹೆಚ್ಚಿಸಲು ಹಾಗೂ ಜನರ ನಡುವೆ ಸಾಹಿತ್ಯವನ್ನು ಕೊಂಡೊಯ್ಯಲಾಗುವುದು ಎಂದ ಅವರು

ಭವಿಷ್ಯದ ದಿನಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಒಂದು ಸೀಮಿತ ಪ್ರದೇಶಕ್ಕೆ ಸೀಮಿತಗೊಳಿಸದೆ ಜನರ ನಡುವೆ ಕೊಂಡೊಯ್ಯುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಲಿದೆ. ಕಾರ್ಕಳ ಸಾಹಿತ್ಯ ಸಂಘದ ಪ್ರೇರಣೆ ಮತ್ತು ಮಾದರಿಯನ್ನು ಅನುಸರಿಸಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು. 

 ರಾಜ್ಯೋತ್ಸವ ಪ್ರಶಸ್ತಿ ಬಯಸಿ ಈ ಬಾರಿ 28ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಅವುಗಳಲ್ಲಿ 66 ಅರ್ಜಿಗಳನ್ನು ಆಯ್ಕೆ ಮಾಡಬೇಕಾಗಿದೆ. ಅಂತಿಮ ಆಯ್ಕೆ ದೊಡ್ಡ ಸವಾಲಾಗಿದೆ ಎಂದರು.

 ಮಂಗಳೂರು ಶ್ರೀ ರಾಮಕೃಷ್ಷ ಮಠದ ಸ್ವಾಮಿ ಜಿತಕಾಮಾನಂದಜೀ ಅಶಿರ್ವಚನ ನೀಡಿ ಸಮಾಜ ಬದಲಾವಣೆಯಲ್ಲಿ ಸಾಹಿತ್ಯ ಕೊಡುಗೆ ಇದೆ. ಸಾಹಿತ್ಯ ಎಂದರೆ ಆಧ್ಯಾತ್ಮವೇ ಆಗಿದೆ ಎಂದರು.  ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಸನ್ಮಾನಿಸಲಾಯಿತು.  

ಮುಂಬೈ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

 ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ಮೊಹನ್ ಆಳ್ವ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಕೆ.ಪಿ.ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್‌ಮೋಹನ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.