logo
WhatsApp Image 2026-04-02 at 14.46.04.jpeg
hindalco everlast.jpeg

ಬೋಟ್ ನಿಂದ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಕಾಪು ಬಳಿಯ ಸಮುದ್ರದಲ್ಲಿ ಪತ್ತೆ

ಟ್ರೆಂಡಿಂಗ್
share whatsappshare facebookshare telegram
7 Jan 2023
post image

ಮೀನುಗಾರಿಕಾ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರನೋರ್ವ ಮೃತಪಟ್ಟ ಘಟನೆ ಕಾಪು ಸಮುದ್ರ ತೀರದ ಬಳಿ ನಡೆದಿದೆ ಮೃತರನ್ನು ಪೆರುವಾಯಿ ಗ್ರಾಮದ 36ವರ್ಷದ ಆನಂದ ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಬಂದರಿನಲ್ಲಿ ಸಾಯಿ ಪ್ರೇಮ್‌ಕುಂದರ ರವರ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಎಂದಿನಂತೆ ಜ.3ರಂದು ಆನಂದ ಅವರು ಮೀನುಗಾರಿಕೆಗೆ ಬೋಟ್ ನಲ್ಲಿ ತೆರಳಿದ್ದರು. ಬಳಿಕ ಬೋಟ್ ದಡಕ್ಕೆ ಬಂದು ನಿಂತುಕೊಂಡಿತ್ತು. ಈ ವೇಳೆ ಆನಂದ ಅವರ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.‌ಎಷ್ಟು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಜ.6ರಂದು ಕಾಪು ಬಳಿ ಸಮುದ್ರದಲ್ಲಿ ವ್ಯಕ್ತಿ ಮೃತದೇಹ ಸಿಕ್ಕಿದ್ದು, ಬಳಿಕ ಅದನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದಲ್ಲಿ ಇರಿಸಲಾಗಿತ್ತು. ಸಮುದ್ರದಲ್ಲಿ ಮೃತದೇಹ ಸಿಕ್ಕಿರುವ ಬಗ್ಗೆ ನಾಪತ್ತೆಯಾಗಿದ್ದ ಆನಂದ ಅವರ ಪತ್ನಿಗೂ ಮಾಹಿತಿ‌ ನೀಡಲಾಗಿತ್ತು. ಅವರು ಸಂಬಂಧಿಕರೊಂದಿಗೆ ಬಂದು ನೋಡಿದಾಗ ಮೃತದೇಹವೂ ಗಂಡ ಆನಂದ ಅವರದೆಂದು ದೃಢಪಟ್ಟಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.