


ಹಾವೇರಿ : ಮೃತಪಟ್ಟ ವ್ಯಕ್ತಿಯೊಬ್ಬ ಪವಾಡದಂತೆ ಬದುಕುಳಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಊರಿಗೆ ಮೃತದೇಹ ತರುತ್ತಿರುವಾಗ ಮತ್ತೆ ವ್ಯಕ್ತಿ ಉಸಿರಾಡುವುದಕ್ಕೆ ಆರಂಭಿಸಿದ್ದಾನೆ.
5 ವರ್ಷದ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿ ಬಳಿಕ ಬದುಕುಳಿದಿರುವ ವ್ಯಕ್ತಿ. ಕಾಮಾಲೆ ರೋಗದಿಂದ ಬಳಲುತ್ತಿದ್ದ ಬಿಷ್ಟಪ್ಪ ಗುಡಿಮನಿ ಅವರನ್ನು ಮೂರ್ನಾಲ್ಕು ದಿನ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಬಿಷ್ಟಪ್ಪ ಗುಡಿಮನಿ ಮೃತಪಟ್ಟಿದ್ದಾರೆ ಎಂದುಕೊಂಡು ಮನೆಯವರು ದೇಹವನ್ನು ಮನೆಗೆ ಕರೆ ತಂದಿದ್ದಾರೆ.
ಕುಟುಂಬದವರು ಬಿಷ್ಟಪ್ಪ ಅವರನ್ನು ಕಳೆದುಕೊಂಡ ದುಃಖದಲ್ಲಿಯೇ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆ ಬಿಷ್ಟಪ್ಪ ಅವರು ನಿತ್ಯ ಊಟ ಮಾಡುತ್ತಿದ್ದ ಅವರಿಗೆ ಬಹಳ ಇಷ್ಟವಾದ ಡಾಬಾ ಮುಂದೆ ಬರುತ್ತಿದ್ದಂತೆ ಅವರ ಮಗ ಡಾಬಾ ಬಂತು ನೋಡು, ಊಟ ಮಾಡ್ತಿಯಾ ಎಂದು ಗೋಳಾಡಿ ಕಣ್ಣೀರಿಟ್ಟಿದ್ದಾರೆ. ಈ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದುಕೊಂಡಿದ್ದ ಬಿಷ್ಟಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ನಿಲ್ಲಿಸಿ ಬಿಷ್ಟಪ್ಪನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಈಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಿಷ್ಟಪ್ಪ ನಿಧನ ಸುದ್ದಿ ಬ್ಯಾನರ್, ವಾಟ್ಸಪ್ ಗ್ರೂಪನಲ್ಲಿ ಓಂ ಶಾಂತಿ ಎಂದು ಸಂಬಂಧಿಕರು ಹಾಕಿದ್ದರು. ಇದೀಗ ಆತನಿಗೆ ಮರುಜೀವ ಬಂದಿದ್ದು ದೇವರ ಪವಾಡ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.