



ಜೆರುಸಲೆಮ್: ಕಾರು ಅಪಘಾತದಲ್ಲಿ ದೇಹದಿಂದ ಬಹುತೇಕ ಬೇರೆಯಾಗಿದ್ದ ಬಾಲಕನ ತಲೆಯನ್ನು ವೈದ್ಯರ ತಂಡ ಜೋಡಿಸಿದೆ.
12 ವರ್ಷದ ಬಾಲಕ ಸುಲೇಮಾನ್ ಹಸ್ಸನ್ ತೀವ್ರವಾಗಿ ಗಾಯಗೊಂಡು, ‘ಇಂಟರ್ನಲ್ ಡಿಕ್ಯಾಪಿಟೇಷನ್ ಸಮಸ್ಯೆ ಎದುರಿಸಿದ. ಆತನ ತಲೆಯು ಬೆನ್ನುಹುರಿಯ ಕಶೇರುಖಂಡದಿಂದ ಬೇರ್ಪಟ್ಟಿತ್ತು.
ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬಹುತೇಕ ಬೇರ್ಪಟ್ಟಿದ್ದ ಶಿರವನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಶಸ್ತ್ರಚಿಕಿತ್ಸಕ ಡಾ. ಒಹಾದ್ ಈನವ್ ಅವರು ಪ್ರತಿಕ್ರಿಯಿಸಿ, ಆಧುನಿಕ ತಂತ್ರಜ್ಞಾನ, ಅನುಭವ ಹಾಗೂ ಕಲಿತ ವಿದ್ಯೆ ಇದಕ್ಕೆ ನೆರವಾದವು. ಆದರೂ ಆತ ಬದುಕುಳಿದಿದ್ದು ಒಂದು ಪವಾಡ ಎಂದರೂ ತಪ್ಪಲ್ಲ ಎಂದರು.
ಈ ಶಸ್ತ್ರಚಿಕಿತ್ಸೆ ನಡೆದು ಒಂದು ತಿಂಗಳಾದರೂ, ಬಾಲಕ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುವವರೆಗೂ ಇದನ್ನು ಆಸ್ಪತ್ರೆ ಗೌಪ್ಯವಾಗಿಟ್ಟಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.