



ಬೆಂಗಳೂರು: ಕೊರೊನಾ, ಓಮೈಕ್ರಾನ್ ಹೆಚ್ಚುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರಕಾರದ ಮಹತ್ವದ ತೀರ್ಮಾನವನ್ನು ಇಂದು ರಾತ್ರಿ ಮಾರ್ಗಸೂಚಿಗಳ ಬಿಡುಗಡೆ, ಮಾಡಲಾಗುವುದು ಮುಂದಿನ 6ನೇ ತಾರೀಖಿನಿಂದ ವೀಕೆಂಡ್ ಕರ್ಫ್ಯೂ ಜಾರಿ ಗುರುವಾರದಿಂದ 2 ವಾರಗಳ ಶಾಲೆ ಬಂದ್
ಸರ್ಕಾರಿ ಕಚೇರಿ, ಮಾಲ್ ಗಳಲ್ಲಿ ಭಾರತ ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿರ್ಧರಿಸಲಾಗಿದೆ. ಮಾಲ್, ಚಿತ್ರಮಂದಿರ, ಪಬ್, ಬಾರ್ ಎಲ್ಲಾ ಸಾರ್ವಜನಿಕ ಸ್ಥಳಗಲ್ಲಿ ಶೇ.50ರ ಮಿತಿ ಜಾರಿಗೊಳಿಸಲಾಗಿದೆ. ಮದುವೆ ಹೊರಾಂಗಣಕ್ಕೆ 200 ಜನರ, ಒಳಾಂಗಣದಲ್ಲಿ 100 ಜನರಿಗೆ ಮಿತಿ ಏರಲಾಗಿದೆ. ಕೋವಿಡ್ ಸಂಪೂರ್ಣ ಡೋಸ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಬರೋರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು. ರಿಂದ 50 ವರ್ಷದವರಿಗೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ಬೆಂಗಳೂರಿನಲ್ಲಿ 10 -12ನೇ ತರಗತಿ ಹೊರತು ಪಡಿಸಿ, 2 ವಾರ ಆಫ್ ಲೈನ್ ತರಗತಿ ಮಾಡಲು ನಿರ್ಧರಿಸಲಾಗಿದೆ. ನಾಳೆ ರಾತ್ರಿ 10 ಗಂಟೆಯಿಂದ ಕೋವಿಡ್ ರೂಲ್ಸ್ ಜಾರಿಯಲ್ಲಿ ಬರಲಿದೆ. 10 ಮತ್ತು 12ನೇ ತರಗತಿಗಳು ಮಾತ್ರ ತೆರೆದಿರಲು ನಿರ್ಧರಿಸಲಾಗಿದೆ. ಆನ್ ಲೈನ್ ತರಗತಿಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ಕರ್ಪ್ಯೂ ತೀರ್ಮಾನಕೈಗೊಳ್ಳಲಾಗಿದೆ. ನೈಟ್ ಕರ್ಪ್ಯೂ ಮತ್ತೆ ಎರಡುವಾರ ವಿಸ್ತರಿಸಲಾಗಿದೆ ಎಂದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.