



ರಂಜೀತ್ ಚಿತ್ರಕ್ಕೆ ಒಂದು ಲಕ್ಷ ವೀಕ್ಷಣೆ
ಬಾಕ್ಸ್ : ಅಂಧಕಾರದ ಬಾಳಿಗೆ ಬೆಳಕಾಗಲು ಹೋಗಿ, ಕತ್ತಲೆ ಗೂಡು ಸೇರಿದ ಅಮಿತ್
ಕನ್ನಡ ಕಿರುಚಿತ್ರ ರಂಗದಲ್ಲಿ ಇತ್ತಿಚೆಗೆ ಬಿಡುಗಡೆಯಾದ ರಂಜೀತ್ ಕಾರ್ಕಳ ಅವರ ನಿರ್ದೇಶನದ ಚಕ್ಷುಶ: ಕಿರುಚಿತ್ರ ಈಗ ಭಾರಿ ಸೌಂಡ್ ಮಾಡುತ್ತಿದ್ದೆ. ಅದು ಅಲ್ಲದೇ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಒಂದು ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಈ ಕಿರುಚಿತ್ರದ ಕುರಿತು ಇಂದಿನ ನಮ್ಮ ಲೇಖನ. ಬಾಲ್ಯದ ಸ್ನೇಹಿತರು ನಮಗೆ ಯಾವಾಗಲೂ ಅಚ್ಚುಮೆಚ್ಚು. ಅವರೊಂದಿಗೆ ಮಾಡಿದ ತರ್ಲೆ, ಕೀಟಲೆ, ತುಂಟಾಟಗಳ ಜೊತೆಗೆ ಆಟವಾಡಿದ ಸವಿನೆನಪುಗಳು, ತೊದಲು ಮಾತುಗಳು, ಚಿಕ್ಕಪುಟ್ಟ ಜಗಳಗಳು ನೆನೆದರೆ ಈಗೊಂತರ ಮನಸ್ಸಿಗೆ ಆಹ್ಲಾದಕರವಾದ ಹಿತ ಕೊಡುತ್ತವೆ. ಬಾಲ್ಯದ ಜೀವನದ ಮಜವೇ ಬೇರೆ. ಹಾಗೆ ತುಂಬಾ ದಿನಗಳ ನಂತರ ಊರಿಗೆ ಬಂದ ಅಮಿತ್ ತನ್ನ ಬಾಲ್ಯದ ಸ್ನೇಹಿತನ ಹತ್ತಿರ ಇನ್ನುಳಿದ ಗೆಳಯರ ಯೋಗ ಕ್ಷೇಮದ ಜೊತೆಗೆ ಅವರು ಸಂಪರ್ಕದಲ್ಲಿದ್ದಾರಾ? ಎಂದು ಕೇಳುತ್ತಾನೆ. ಆದರೆ ಸ್ನೇಹಿತ ಬಾಲ್ಯದಲ್ಲಿ "ಅನು" ಜೊತೆಗೆ ಆಡಿದ ಮದುವೆಯಾಟದ ಬಗ್ಗೆ ತಮಾಷೆಯಾಗಿ ಮಾತಾಡಿ ಹಳೆಯ ನೆನಪನ್ನು ಮರುಕಳಿಸುತ್ತಾನೆ. ಸ್ವಲ್ಪ ನಸುನಕ್ಕು ಅಮಿತ್, ಅನೂ ಗೆ ಫೋನ್ ಮಾಡಿ. ನಾಳೆ ಭೇಟಿಯಾಗುವಂತೆ ಕೇಳಿದಾಗ ಅವಳು ಕೂಡ ತನ್ನ ಕೆಲಸ ಮುಗಿಸಿ ಭೇಟಿಯಾಗುವುದಾಗಿ ತಿಳಿಸುತ್ತಾಳೆ. ಗೊತ್ತು ಮಾಡಿದ ದಿನದಂದು ಅನು, ಅಮಿತ್ ಗಿಂತ ಮೊದಲೇ ಬಂದು ಬಾಲ್ಯದ ಆಟೋಟಗಳನ್ನು ನೆನೆಯುತ್ತ, ಮೈಮರೆತು ಇವನ ಭೇಟಿಗಾಗಿ ಕುಳಿತುಕೊಂಡಾಗ ಅಮಿತ್ ಬಂದು ಅವಳನ್ನು ಎಚ್ಚರಿಸುತ್ತಾನೆ. ಆಗ ಇಬ್ಬರು ಆತ್ಮೀಯವಾಗಿ ಮಾತನಾಡುತ್ತ ಅನು ತನ್ನ ಸ್ನೇಹಿತೆಯಾದ "ಶಾರು" ರಸ್ತೆ ಅಪಘಾತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡಿದ್ದು, ಈಗ ಅವಳ ಎಲ್ಲಾ ಜವಾಬ್ದಾರಿಗಳನ್ನು ತಾನೇ ನಿರ್ವಹಿಸುತ್ತಿರುವುದಾಗಿ ತಿಳಿಸಿದಾಗ ಅಮಿತ್ ಕೂಡ ನಿನ್ನ ಸ್ನೇಹಿತನಾಗಿ ಅವಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸುತ್ತಾನೆ. ಆಗ ಅನು ಅವನನ್ನು ನಂಬಿ ಮಾರ್ಕೆಟ್ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ತಿಳಿಸಿ ಶಾರೂಗೆ ಅಮಿತ್ ನನ್ನು ಪರಿಚಯಿಸಿ ಹೊರಡುತ್ತಾಳೆ. ಈಕಡೆ ಅಮಿತ್ ಶಾರೂಗೆ ಸಹಾಯ ಮಾಡುತ್ತಾ ತನಗೆ ಗೊತ್ತಿಲ್ಲದೆ ಅವಳನ್ನು ಪ್ರೇಮಿಸುತ್ತಾನೆ. ಕೆಲವು ದಿನಗಳ ನಂತರ ಫೋನ್ ಮಾಡಿದ ಅನು ಇವರಿಬ್ಬರ ಯೋಗಕ್ಷೇಮ ವಿಚಾರಿಸಿ, ನಾಳೆ ಒಬ್ಬರಿಗೊಬ್ಬರು ಸರ್ಪ್ರೈಸ್ ನೀಡುವುದಾಗಿ ತಿಳಿಸಿದರು.ಆದರೆ ಮರುದಿನ ಅನು ಅಮಿತ್ ಗೆ ಪ್ರೀತಿಸುತ್ತಿರುವುದಾಗಿ ತಿಳಿಸಿದಾಗ, ಅಮಿತ್ "ಶಾರೂ" ನ ಪ್ರೀತಿಸುತ್ತಿರುವುದಾಗಿ ತಿಳಿಸಿದಾಗ ಇವಳ ಹೃದಯ ಒಡೆದು ಹೋಯ್ತು. ನೋವನ್ನು ಸಹಿಸಿಕೊಂಡು , ಮನದೊಳಗೆ ಅಮಿತ್ ಬಗ್ಗೆ ಹೆಮ್ಮೆ ಪಡುತ್ತಾ, ಬಿಟ್ಟುಕೊಟ್ಟಳು. ಆದರೆ ಶಾರೂ ವನ್ನು ಒಪ್ಪಿಸಿದ ಅಮಿತ್ ಅವಳ ಪ್ರೀತಿ ಪಡೆಯುವುದಕ್ಕಾಗಿ ಪಾರ್ಟಿ, ಬರ್ತಡೇ, ಔಟ್ ಟೂರ್ , ಇನ್ನೀತರ ಆಡಂಬರದ ಕಾರ್ಯಕ್ರಮಗಳನ್ನು ಮಾಡಿದ. ಕೊನೆಗೆ ತನ್ನ ಕಣ್ಣುಗಳನ್ನು ಶಾರೂ ಗೆ ದಾನ ಮಾಡುವುದಾಗಿ ಇನ್ನುಳಿದ ಸ್ನೇಹಿತರಿಗೆ ತಿಳಿಸಿ, ಅವಳಿಗೆ ಗೊತ್ತಾಗದಂತೆ ರಹಸ್ಯ ಕಾಪಾಡುವಂತೆ ವಿಜ್ಞಾಪಿಸುತ್ತಾನೆ. ಕೊನೆಯಲ್ಲಿ ಶಾರೂ ಗೆ ಕಣ್ಣಗಳು ಬಂದು, ಎಲ್ಲಾ ಸ್ನೇಹಿತರ ಮುಖ ನೋಡಿ ಹರ್ಷದಿಂದ ಕುಣಿದಾಡುತ್ತಾಳೆ. ಆದರೆ ಅಮಿತ್ ನ ಹತ್ತಿರ ಹೋದಾಗ ಅವನು ಬೇರೆ ಯಾರಿಗೋ ಕಣ್ಣುಗಳನ್ನು ದಾನ ಮಾಡಿರುವುದನ್ನು ತಿಳಿದು, ಕತ್ತಲೆ ಲೋಕ ನನಗೆ ಸಾಕಾಗಿ ಹೋಗಿದೆ. ಇನ್ನು ನಿನ್ನಂಥ ಕುರುಡನ ಜೀವನಕ್ಕೆ ನಾನೇಗೆ ಬೆಳಕಾಗಲಿ ಎಂದು ಮೂಗು ಮುರಿದು ಅವನನ್ನು ಬಿಟ್ಟು ಶಾರೂ ಹೊರಟು ಹೋಗುತ್ತಾಳೆ. ಕೊನೆಯಲ್ಲಿ ಅಮಿತ್ ಅನು ಗೆ ನಿನ್ನಂತವಳ ಪವಿತ್ರ ಪ್ರೀತಿ ಕಡೆಗಣಿಸಿದ ನನಗೆ ತಕ್ಕ ಶಿಕ್ಷೆಯಾಯ್ತು ಎಂದು ಹೇಳುತ್ತಾ, ಅವಳಲ್ಲಿ ಕ್ಷಮಾಪಣೆ ಕೇಳಿದಾಗ, ಅನು ಉತ್ಸಾಹದ ಚಿಲುಮೆಯೊಂದಿಗೆ ನಗುತ್ತಾ ನಿನಗೆ ಬೆಳಕಾಗಿ ನಾನು ಮತ್ತು ಸ್ನೇಹಿತರೆಲ್ಲಾ ಇರುವುದಾಗಿ ತಿಳಿಸುತ್ತಾಳೆ ಇದು ಚಕ್ಷುಶ: ಚಿತ್ರದ ಚಿತ್ರಕಥೆ. ಇನ್ನೂ ನಾಯಕ ನಟರಾಗಿ ಅಮೀತ್ ಗಂಗೂರ್, ನಾಯಕಿ ನಟಿಯಾಗಿ ಶರ್ಮೀಳಾ, ರಚನಾ ಜೆ ಶೆಟ್ಟಿ, cast ಶೈಲಾ ಮೋಹನ್ ,ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ರಂಜೀತ್ ಕಾರ್ಕಳ, ಪುನೀತ್ ರಾಜ್ ಅವರ ಲಿರಿಕ್ಸ್, ಮನು ಬಿಕೆ ಅವರ ಛಾಯಾಗ್ರಹಣ, ಸುಪ್ರೀತ್ ಬಿಕೆ ಅವರ ಸಂಕಲನ, ಸಂಗೀತ ನಿರ್ದೇಶಕ ಆದಿಲ್ ನದಾಫ್, ಅನಿರುದ್ಧ ಶಾಸ್ತ್ರೀ ಹಾಗೂ ಅಕ್ಷರಾ ಮೋಹನ್ ಅವರ ಗಾಯನದಲ್ಲಿ ಡಿ ಬೀಟ್ಸ್ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಾಗಿದ್ದು ಒಂದು ಲಕ್ಷ ಜನ ವೀಕ್ಷಣೆ ಪಡೆದುಕೊಂಡಿದೆ ಅದರ ಜೊತೆಗೆ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದೆ "ಚಕ್ಷುಶ:"
•ಹನಮಂತ ಐಹೊಳೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.