logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳದ ಇತಿಹಾಸ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆಹಾಗು ಬ್ರಹ್ಮಕಲಶೋತ್ಸವ

ಟ್ರೆಂಡಿಂಗ್
share whatsappshare facebookshare telegram
11 Mar 2023
post image

ಕಾರ್ಕಳ: ಕಾರ್ಕಳದ ಇತಿಹಾಸ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆಹಾಗು ಬ್ರಹ್ಮಕಲಶೋತ್ಸವದ ಪೂಜಾ ಕೈಂಕರ್ಯಗಳು ವಿಜೃಂಬಣೆಯಿಂದ ನಡೆಯುತಿದ್ದು ಜನಜಾತ್ರೆಯಿಂದ ತುಂಬಿ ತುಳುಕುತ್ತಿದೆ .ಸುಮಾರು ‌19 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಾಲಯದ ಒಂಬತ್ತು ತಿಂಗಳಿನಲ್ಲಿ ಸಂಪೂರ್ಣವಾಗಿ ಶಿಲಾಮಯಗೊಂಡು ಜೀರ್ಣೋದ್ಧಾರ ಮಾಡಲಾಗಿದೆ. ಜಾರ್ಕಳ ಪ್ರಸಾದ್ ತಂತ್ರಿ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ವೈದಿಕರು ಪೂಜಾ ವಿಧಿ ವಿಧಾನಗಳಲ್ಲಿ ಭಾಗಿಯಾಗಿದ್ದಾರೆ. ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ,ಕೆ.ಜಿ ಗೋಪಾಲಕೃಷ್ಣ ರಾವ್ ಆಡಳಿತ ಮೊಕ್ತೇಸರರ ನೇತೃತ್ವದಲ್ಲಿ ನಡೆಯಲಿದೆ.ನಿತ್ಯ ಸುಮಾರು ಐವತ್ತು ಸಾವಿರ ಭಕ್ತರು ಅಗಮಿಸುತಿದ್ದು ಜನಜಾತ್ರೆ ಕಂಡು ಬರುತ್ತಿದೆ. ಭಕ್ತಾಧಿಗಳಿಗೆ ಎಳನೀರು ಶರಬತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರ ಕಣ್ಮನ ಸೆಳೆದ ತರಕಾರಿ ಅಲಂಕಾರ : ದೇವಾಲಯದ ಮುಖ್ಯ ಮಂಟಪ ಹಾಗೂ ಮುಖದ್ವಾರ ಸುತ್ತು ಪೌಳಿಯ ಸುತ್ತಲು ವಿವಿಧ ರೀತಿಯ ತರಕಾರಿಗಳ ಅಲಂಕಾರವನ್ನು ಮಾಡಲಾಗಿದೆ .25 ವರ್ಷಗಳಿಂದ ಅಲಂಕಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಶರವಣ ಮೂರ್ತಿ ಅವರ 35 ಜನರ ತಂಡ ದಿನ‌ನಿತ್ಯ ಅಲಂಕಾರದ ಹೊಣೆ ಹೊತ್ತಿದ್ದು ವಿವಿಧ ರೀತಿಯ ತರಕಾರಿಗಳ ಅಲಂಕಾರವನ್ನು ಮಾಡುತಿದ್ದಾರೆ .
ದೇವಾಲಯದ ಗರ್ಭಗುಡಿಯ ಹೊರಗಿನ ಸುತ್ತುಪೌಳಿಯಲ್ಲಿ ಸುತ್ತಲೂ ಬುದುಕುಂಬಳ ಕಾಯಿ, ಅಲಂಕಾರಿಕಾ ವಾಗಿ ಇಡಲಾಗಿದೆ . ದೇವಾಲಯದ ಒಳಗಿನ ಎಲ್ಲಾ ಕಂಬಗಳಿಗೆ ಜೋಳ ಕಬ್ಬು ಗಳನ್ನು ಓರಣವಾಗಿ ಜೋಡಿಸಲಾಗಿದ್ದು ಗರ್ಭಗುಡಿಯ ಹೊರ ಭಾಗದಲ್ಲಿ ವಿವಿಧ ಆಕೃತಿಗಳಿಗೆ ಬಾಳೆಗೊನೆ , ಸಿಹಿಗೆಣಸು ಮಂಗಳೂರು ಸೌತೆಕಾಯಿ , ಶುಂಟಿಗಳನ್ನು ಜೋಡಿಸಲಾಗಿದೆ. . ಮೇಲ್ಛಾವಣಿ ಯಲ್ಲಿ ಮಂಗಳೂರು ಸೌತೆಗಳನ್ನು ವಿವಿಧ ಸೊಪ್ಪುಗಳು ಬದನೆಕಾಯಿ , ಮೊಸಂಬಿ ಅ್ಯಪಲ್ ಸೇರಿದಂತೆ ವಿವಿಧ ರೀತಿಯ ಹಣ್ಣುಹಂಪಲುಗಳನ್ನು ಬಳಸಲಾಗಿದೆ.ದೇವಾಲಯದ ಅಲಂಕಾರಕ್ಕಾಗಿ ಹಣ್ಣು ಹಂಪಲು ತರಕಾರಿಗಳನ್ನು ಪುನರ್ಬಳಕೆ ಮಾಡಬಹುದು.

ನಿತ್ಯ 30000 ಜನರಿಗೆ ಭಕ್ತರಿಗೆ ಅನ್ನದಾನ : ಉಡುಪಿಯ 80 ಜನ ಪಾಕ ಪ್ರವೀಣರ ಅಡುಗೆ ತಂಡವು 30000 ಭಕ್ತಾದಿಗಳು ಗಳಿಗೆ ಅನ್ನದಾನ ಸೇವೆ ನಡೆಯುತ್ತಿದೆ ‌. ಬೆಳಗ್ಗಿನ ಚಹಾ ತಿಂಡಿ 3000 ಭಕ್ತಾಧಿಗಳಿಗೆ ಅವಲಕ್ಕಿ ಉಪ್ಪಿಟ್ಟು ಚಹಾ ,ಕಾಫಿ , ಮಧ್ಯಾಹ್ನ ಹಾಗೂ ರಾತ್ರಿ ಉಪ್ಪಿನಕಾಯಿ , ಸುವರ್ಣ ಗೆಡ್ಡೆ ಕಡ್ಲೆ ಸುಕ್ಕ , ಕುಂಬಳಕಾಯಿ ಹುಳಿ , ಅನ್ನ ಸಾರು , ರವೆಲಡ್ಡು ಪಾಯಸ , ಮಜ್ಜಿಗೆ , ವ್ಯವಸ್ಥೆ ಕಲ್ಪಿಸಲಾಗಿದೆ. ಮಾ.14 ರವರೆಗೆ ಸುಮಾರು 5 ಲಕ್ಷ ಭಕ್ತರಿಗೆ ಅನ್ನದಾನ ಸೇವೆ ನಡೆಯಲಿದೆ.

ಗಿಡನೆಡುವ ಮೂಲಕ ಪರಿಸರ ಕಾಳಜಿಗೆ ಒತ್ತು : ಕೋಟೆ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಾಲಯದ ಜೀರ್ಣೋದ್ಧಾರ ಕ್ಕಾಗಿ ಅನೇಕ ಮರಗಳನ್ನು ಬಳಸಲಾಗಿದ್ದು ಅದಕ್ಕೆ ಪ್ರತಿಯಾಗಿ ಅರಣ್ಯಾ ಇಲಾಖೆ ವತಿಯಿಂದ 500 ಗಿಡಗಳನ್ನು ನೆಡಲಾಗುತಿದೆ. ಕಾರ್ಕಳ ತೆಳ್ಳಾರು ಕುಂಬ್ರಪದವಿನ‌ಬಳಿ ಜಾಗವನ್ನು ಮೀಸಲಿಡಲಾಗಿದೆ. ಪರಿಸರ ಕಾಳಜಿಗೆ ಒತ್ತು ನೀಡಲಾಗಿದೆ .

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.