



ಹುಬ್ಬಳ್ಳಿ : ಕಳೆದ ವರ್ಷ ಸಾಕಷ್ಟುವಿರೋಧದ ನಡುವೆ ಇಲ್ಲಿನ ಈದ್ಗಾ ಮೈದಾನ (ರಾಣಿಚೆನ್ನಮ್ಮ ಮೈದಾನ)ದಲ್ಲಿ 3 ದಿನ ಗಣೇಶೋತ್ಸವ ಆಚರಿಸಿದ್ದ ಹಿಂದು ಪರ ಸಂಘಟನೆಗಳು ಈ ಸಲವೂ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿವೆ.
ಈ ಸಲ 11 ದಿನದ ಗಣೇಶೋತ್ಸವ ಆಚರಿಸಲು ಯೋಚನೆ ನಡೆಸಿದ್ದು, ಈ ಕುರಿತು ಕೆಲ ಸಂಘಟನೆಗಳು ಈಗಾಗಲೇ ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮನವಿ ಕೂಡ ಸಲ್ಲಿಸಿವೆ. ಕಳೆದ ಸಲ ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹಿಂದುಪರ ಸಂಘಟನೆಗಳು ಆಲೋಚಿಸಿದ್ದವು. ಅದರಂತೆ ಪಾಲಿಕೆಗೆ ಮನವಿ ಸಲ್ಲಿಕೆ ಮಾಡಿದ್ದವು
ಸಾಕಷ್ಟುವಿರೋಧ ಕೂಡ ವ್ಯಕ್ತವಾಗಿತ್ತು. ಆಗ ಮಹಾನಗರ ಪಾಲಿಕೆಯೂ ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿತ್ತು.ಈ ಸಂಬಂಧ ಕೆಲ ಮುಸ್ಲಿಂ ಸಂಘಟನೆಗಳು ಹೈಕೋರ್ಚ್ ಮೆಟ್ಟಿಲು ಕೂಡ ಏರಿದ್ದವು. ಈ ವರ್ಷ 11 ದಿನ ಆಚರಿಸಬೇಕೆಂದು ನಿರ್ಧರಿಸಿದ್ದೇವೆ. ಆದ ಕಾರಣ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಕೋರಿದೆ.
ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ್, ಕಾರ್ಯದರ್ಶಿ ರಘು ಯಲ್ಲನವರ ಸೇರಿದಂತೆ ಹಲವರು ಮನವಿ ಸಲ್ಲಿಸಿದ್ದಾರೆ. ಇದೀಗ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತದೆ.ಈ ಸಲ ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ? ಕಳೆದ ಬಾರಿಯಂತೆ 3 ದಿನದ ಮಟ್ಟಿಗೆ ಮಾತ್ರ ಅನುಮತಿ ಸಿಗುತ್ತದೆಯೋ ಅಥವಾ 11 ದಿನ ಆಚರಣೆಗೆ ಅನುಮತಿ ಸಿಗುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.