logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಜೀವನ ಒಂದು ಇದು ಮುಗಿಯದ ಪಯಣ..................

ಟ್ರೆಂಡಿಂಗ್
share whatsappshare facebookshare telegram
25 May 2022
post image

ಕಾರ್ಕಳ ಜೋಡುಕಟ್ಟೆಯ ಶಿಲ್ಪಾ ಬರಿತಾರೆ

ದೇವರು ನೀಡಿದ ಜೀವನ ಇದನ್ನು ವರವೋ ಅಥವಾ ಶಾಪವೋ ಎಂದು ಮಾಡುವುದು ವ್ಯಕ್ತಿಯ ಕೈಯಲ್ಲಿದೆ ಬದುಕು ಒಂದು ಸುಂದರ ಸಾಗರ. ಮಳೆಯೆಂಬ ಉಸಿರನ್ನು ದೇವರು ಸುರಿಸುವ ಮೂಲಕ ಬದುಕನ್ನು ನಿತ್ಯನೂತನ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ದೇವರು ನಮಗೆ ಎಲ್ಲಾ ರೀತಿ ಅವಕಾಶ ವೆಂಬ ಬಂಗಾರವನ್ನು ನೀಡಿ ನಮಗೆ ಬದುಕಲು ದಾರಿಮಾಡಿಕೊಟ್ಟರು ನಾವು ಬಂಗಾರವನ್ನು ಬಳಸದೆ ಕಾರಿನಲ್ಲಿ ತುಳಿದು ಮುಂದೆ ಸಾಗುತ್ತಾ ನಮ್ಮ ಹಣೆಬರಹ ಎಂದು ಬೈಯ್ಯುತ್ತೇವೆ. ಮಾನವನಿಗೆ ಮಾತು ನಗು ವಂದನೆಯನ್ನು ನೀಡಿ ಮನುಷ್ಯ ಎಲ್ಲಾ ಜೀವಿಗಳಿಗಿಂತ ಭಿನ್ನ ವಾಗಿದ್ದಾನೆ ಎಂಬುದು ಅಕ್ಷರ ಸಹ ಸತ್ಯ ಮನುಷ್ಯನಿಗೆ ಬುದ್ಧಿ ಶಕ್ತಿ ನೀಡಿ ಸರಿ-ತಪ್ಪುಗಳನ್ನು ಸರಿಯಾಗಿ ಕೆಲಸ ಮಾಡುವಂತೆ ಮಾಡಿದ ದೇವರು ಪ್ರತಿಫಲವಾಗಿ ಏನನ್ನು ಅಪೇಕ್ಷಿಸಲಿಲ್ಲ . ಇಡೀ ನಮ್ಮ ಜೀವನ ನಿಂತಿರುವುದು ನಮ್ಮ ನಿರ್ಧಾರದ ಮೇಲೆ ನಾವು ಹೇಗೆ ನಮ್ಮ ಜೀವನವನ್ನು ಅರ್ಥ ಪೂರ್ಣಗೊಳಿಸುತ್ತೇವೆ ಎಂಬ ದೃಢ ನಿರ್ಧಾರ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು. ಅಂತೆಯೇ ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟಪಟ್ಟು ಕೆಲಸ ಮಾಡಲು ಹಿಂದೇಟು ಹಾಕಬಾರದು. ಯಶಸ್ಸಿಗೆ ಎಲ್ಲಿ ಇಲ್ಲ ಕಷ್ಟಪಟ್ಟು ಕೆಲಸ ಮಾಡಿದರೆ ನಮ್ಮ ಗುರಿಯನ್ನು ತಲುಪಬಹುದು. ದೇವರು ನಮಗೆ ಕಣ್ಣು ಕಿವಿಗೆ ಬಾಯಿಯನ್ನು ನೀಡಿದ್ದಾನೆ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದರೂ ನಾವು ಮೂಕರಂತೆ ಕಿವುಡರಂತೆ ಬದುಕುತ್ತಿದ್ದೇವೆ ಸಾಧನೆ ಮಾಡಬೇಕಾದರೆ ಕೈಕಟ್ಟಿ ಕುಳಿತರೆ ಮಹಾಭಾರತ ಯುದ್ಧದಲ್ಲಿ ಅರ್ಜುನನ ತಾನು ಯುದ್ಧ ಮಾಡುವುದಿಲ್ಲ ಎಂದು ಹಿಂದೆ ಸರಿದಾಗ ಕೃಷ್ಣಪರಮಾತ್ಮ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಾನೆ ಆದರೆ ಇಂದಿನ 21ನೇ ಶತಮಾನದಲ್ಲಿ ಯಾವುದೇ ಕೃಷ್ಣಪರಮಾತ್ಮ ಅವತಾರ ಎತ್ತಿ ಬರುವುದಿಲ್ಲ ನನ್ನ ಏಳಿಗೆಗೆ ನಾನೇ ಶಿಲ್ಪಿ ಎಂಬಂತೆ ನಾವು ಅನ್ಯಾಯದ ವಿರುದ್ಧ ಹೋರಾಡಬೇಕು ದೇಶವನ್ನು ಭದ್ರವಾಗಿರಬೇಕು ಶ್ರಮಿಸಬೇಕು ನಮಗೆ ಜನ್ಮ ನೀಡಿದ್ದಕ್ಕೆ ನಾವು ಈ ರೀತಿ ಪ್ರತಿಫಲ ನೀಡಬಹುದು...

ಜೀವನ ಸಾರದ ಈ ಕವನ ಇಷ್ಟವಾಯಿತು

ಶಿವಪ್ರಸಾದ ಮಿಣಜಿಗಿ ಬರೆದ ಕವನ

ಸುಖ ದುಃಖಗಳ ಪಯಣವೇ ನಮ್ಮ ಜೀವನ ಏರು ಪೇರುಗಳ ರಾಗದ ಬದುಕೇ ನಮ್ಮ ಗಾಯನ

ಬಾಳ ಹಾದಿಯಲಿ ತೊಡಕುಗಳೆಷ್ಟೊ ಖುಷಿಯ ಪಡೆಯಲು ಸಾಂತ್ವನದ ಒಂದು ಮಾತು ಸಾಕು ಎಲ್ಲ ನೋವು ಮರೆಯಲು ನೂರು ದಿನಗಳ ಬೇಕು ಎಲ್ಲರ ಪ್ರೀತಿ ಗಳಿಸಲು ಒಂದೇ ನಿಮಿಷ ಸಾಕು ಗಳಿಸಿದ ಪ್ರೀತಿ ಅಳಿಸಲು

ದುಃಖದಲಿ ಮರುಗಬೇಡ ಒಳ್ಳೆಯ ಕಾಲ ಬರಲಿದೆ ಚಿಂತೆ ಅಳಿಸಿ ಸಂತಸದ ನಗು ಮುಖದಲಿ ಅರಳಲಿದೆ ಸಂತಸದ ಕ್ಷಣಗಳಲಿ ದುಃಖದ ದಿನಗಳ ನೆನೆಯುತಿರು ಸಂತಸದ ದಿನವು ಕೂಡಾ ಕ್ಷಣಿಕವೆಂದು ಮರೆಯದಿರು

   --------ಮಿನುಗು ತಾರೆ 
Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.