



ಜೆಎಸ್ಡಬ್ಲ್ಯು ಗ್ರೂಪ್ ಕರ್ನಾಟಕದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂಗೂ ಅಧಿಕ ಹೂಡಿಕೆ ಮಾಡಲು ನಿರ್ಧರಿಸಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಸಂಸ್ಥೆಯು ಕರ್ನಾಟಕ ಸರ್ಕಾರದೊಂದಿಗೆ ಎಂಒಯುಗೆ ಸಹಿಹಾಕಿದೆ.
ವಿಜಯನಗರದಲ್ಲಿರುವ ತನ್ನ ಉಕ್ಕು ಕಾರ್ಖಾನೆಯನ್ನು ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಿದೆ. ವಿಶ್ವದಲ್ಲೇ ಅತಿದೊಡ್ಡ ಮತ್ತು ಅತಿ ಆಧುನಿಕ ಉಕ್ಕು ಕಾರ್ಖಾನೆಯಾಗಿ ಇದು ಪರಿವರ್ತನೆಯಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್ಗಳನ್ನು ಬಳಸಲಾಗುತ್ತದೆ. ಅತ್ಯುನ್ನತ ಮಟ್ಟದ ಎಲೆಕ್ಟ್ರಿಕಲ್ ಸ್ಟೀಲ್ ಉತ್ಪಾದನೆ ಇಲ್ಲಿ ನಡೆಯಲಿದೆ. ಈ ಸ್ಟೀಲ್ ಘಟಕ ಅಭಿವೃದ್ಧಿಗೆ ಜೆಎಸ್ಡಬ್ಲ್ಯು 43,000 ಕೋಟಿ ರೂ ಹೂಡಿಕೆ ಮಾಡಲಿದೆ.
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಇನ್ ಕರ್ನಾಟಕ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಮಂತ್ರ ಅಳವಡಿಸಿಕೊಂಡಿರುವ ಜೆಎಸ್ಡಬ್ಲ್ಯು ಗ್ರೂಪ್ ಸಂಸ್ಥೆಯ ಛೇರ್ಮನ್ ಸಜ್ಜನ್ ಜಿಂದಾಲ್ ಅವರು ಕರ್ನಾಟಕವನ್ನು ತಮ್ಮ ಕರ್ಮಭೂಮಿ ಎಂದು ಕರೆದಿದ್ದಾರೆ. ರಾಜ್ಯದಲ್ಲಿ ಇರುವ ಹೂಡಿಕೆ ಸ್ನೇಹಿ ವಾತಾವರಣ, ಉತ್ತಮ ಆಡಳಿತ ನೀತಿ, ಕೌಶಲ್ಯವಂತ ಕೆಲಸಗಾರರ ಸಮೂಹ ಇವೆಲ್ಲವನ್ನೂ ಅವರು ಪ್ರಶಂಸಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.