logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳ;ಕಾರ್ಕಳ ಉತ್ಸವದಲ್ಲಿ ಸಾಧಕರ ಹೆಸರುಗಳನ್ನು ವೇದಿಕೆಗೆ ನೀಡುವ ಮೂಲಕ ಗೌರವ ಅರ್ಪಣೆ

ಟ್ರೆಂಡಿಂಗ್
share whatsappshare facebookshare telegram
6 Mar 2022
post image

ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಮಾರ್ಚ್ ೧೦ ರಿಂದ ೨೦ ರವರೆಗೆ ನಡೆಯುವ ಕಾರ್ಕಳ ಉತ್ಸವದ ಬೆಳಕಲ್ಲಿ ಕಾರ್ಕಳ ವಿಶೇಷ ರೀತಿಯಲ್ಲಿ ಪ್ರಕಾಶಿಸಲಿದೆ. ಈ ಬಗ್ಗೆ ತಯಾರಿಗಳು ಭರದಿಂದ ಸಾಗುತ್ತಿದ್ದು ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರ ತಂಡ ಹಗಲಿರುಳೆನ್ನದೆ ಟೊಂಕ ಕಟ್ಟಿ ಉತ್ಸವದ ಯಶಸ್ಸಿಗೆ ದುಡಿಯುತ್ತಿದ್ದಾರೆ. ಈ ಉತ್ಸವ ಸಂಭ್ರಮದ ಹಬ್ಬ ಮಾತ್ರವಲ್ಲ, ಕಾರ್ಕಳ ಜನಮಾನಸದಿಂದ ಮರೆಯಾದ ಸಾಧಕರನ್ನು ಸ್ಮರಿಸುವ ಯುವ ಪೀಳಿಗೆಗೆ ಅವರ ಬಗ್ಗೆ ತಿಳಿಸುವ ಕಾರ್ಯವೂ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾತ್ಮರ ಹೆಸರನ್ನು ವೇದಿಕೆ, ಮಳಿಗೆ ಸಭಾಂಗಣಗಳಿಗೆ ಹೆಸರಿಸುವ ಮೂಲಕ ಗೌರವ ನಮನ ಈ ಉತ್ಸವದಲ್ಲಿ ನಡೆಯಲಿದೆ.

ಜಸ್ಟೀಸ್ ಕೆ.ಎಸ್ ಹೆಗ್ಡೆ ವೇದಿಕೆ : ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಲೋಕಸಭೆಯ ಸ್ಪೀಕರ್ ಆಗಿ ಅಂತರಾಷ್ಟಿçÃಯ ಮನ್ನಣೆಯ ನಿಟ್ಟೆ ಎಜುಕೇಶನ್ ಟ್ರಸ್ಟ್ನ ಸಂಸ್ಥಾಪಕರಾದ ದಿ. ಕೆ.ಎಸ್ ಹೆಗ್ಡೆ ಯವರ ಹೆಸರನ್ನು ಸ್ವರಾಜ್ ಮೈದಾನದಲ್ಲಿ ಭವ್ಯ ವೇದಿಕೆಗೆ ಇಡಲಾಗಿದೆ. ಉತ್ಸವದ ಕೊನೆಯ ಮೂರು ದಿನಗಳ ಅದ್ದೂರಿ ವೈಭವದ ವೈವಿಧ್ಯಮಯ ಕಾರ್ಯಕ್ರಮಗಳು ರಾಜ್ಯದ ಪ್ರಸಿದ್ಧ ಕಲಾವಿದರ ಉಪಸ್ಥಿತಿಯಲ್ಲಿ ಈ ವೇದಿಕೆಯಲ್ಲಿ ಸಂಗಮಗೊಳ್ಳಲಿದೆ.

ಗೋಪಾಲ ಭಂಡಾರಿ ವೇದಿಕೆ : ಕಾರ್ಕಳದ ಶಾಸಕರಾಗಿದ್ದ ಸರಳ ರಾಜಕಾರಣಿ ದಿ. ಗೋಪಾಲ ಭಂಡಾರಿಯವರ ಹೆಸರನ್ನು ಕಾರ್ಕಳದ ಗಾಂಧಿ ಮೈದಾನದ ವೇದಿಕೆಗೆ ಇಡಲಾಗಿದ್ದು, ಮಾರ್ಚ್ ೧೦ ರಂದು ಈ ವೇದಿಕೆಯಲ್ಲಿ ಕಾರ್ಕಳ ಉತ್ಸವದ ಉದ್ಘಾಟನೆಯಿಂದ ಮೊದಲ್ಗೊಂಡು ನಿರಂತರ ಏಳು ದಿನ ಈ ವೇದಿಕೆಯಲ್ಲಿ ಕನ್ನಡ, ತುಳು, ಕೊಂಕಣಿ ಕಾರ್ಯಕ್ರಮಗಳು, ಯಕ್ಷಗಾನ, ನಾಟ್ಯ ಸಂಗೀತ, ಹಾಸ್ಯ ಕಾರ್ಯಕ್ರಮಗಳು ನಡೆಯಲಿದೆ.

ರೆಂಜಾಳ ಗೋಪಾಲಕೃಷ್ಣ ಶೆಣೈ ಮಳಿಗೆ : ಶಿಲ್ಪ ಕಲೆಯಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಧರ್ಮಸ್ಥಳದ ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿದ ಮಹಾನ್ ಶಿಲ್ಪಿ ದಿ. ರೆಂಜಾಳ ಗೋಪಾಲಕೃಷ್ಣ ಅವರ ನೆನಪಿಗಾಗಿ ವಸ್ತು ಪ್ರದರ್ಶನ ಒಂದು ವಿಭಾಗಕ್ಕೆ ಇವರ ಹೆಸರನ್ನು ಇಡಲಾಗುತ್ತಿದೆ. ಚಿತ್ರಕಲೆ ಮತ್ತು ಶಿಲ್ಪಕಲೆಯ ವಿವಿಧ ಪ್ರದರ್ಶನಗಳು ಬೇರೆ ಬೇರೆ ರಾಜ್ಯಗಳ ವಿಶೇಷ ಕಲೆಗಳು ಇಲ್ಲಿ ಅನಾವರಣಗೊಳ್ಳಲಿದೆ.

ಶಿಲ್ಪಿ ಶ್ಯಾಮರಾಯ ಆಚಾರ್ಯ ಮಳಿಗೆ : ಮೊದಲ ಶಿಲ್ಪಕಲಾ ಅಧ್ಯಕ್ಷರಾಗಿದ್ದ ಶಿಲ್ಪಿ ಶ್ಯಾಮರಾಯ ಆಚಾರ್ಯ ರವರ ನೆನಪನ್ನು ಇನ್ನೊಂದು ವಿಭಾಗದಲ್ಲಿ ಸ್ಮರಿಸಿಕೊಳ್ಳಲಾಗುತ್ತಿದೆ. ರಾಜ್ಯ ಹಲವು ಜಿಲ್ಲೆಗಳು, ಪ್ರಸಿದ್ದ ಕಲಾಕೃತಿಗಳು, ಪುಸ್ತಕ ಪ್ರದರ್ಶನ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಈ ವಿಭಾಗದಲ್ಲಿ ನಡೆಯಲಿದೆ.

ಕವಿ ಮುದ್ದಣ್ಣ ವೇದಿಕೆ : ಕನ್ನಡ ಸಾಹಿತ್ಯ ಲೋಕದ ಮಹಾಕವಿ ನಂದಳಿಕೆಯ ಮುದ್ದಣ್ಣ ಹಲವು ಮಹಾಕಾವ್ಯ ಮತ್ತು ಯಕ್ಷಗಾನ ಪ್ರಸಂಗಗಳ ನಿರ್ಮಾತೃ ಮಾರ್ಚ್ ೧೧ ಮತ್ತು ೧೨ ರಂದು ಭುವನೇಂದ್ರ ಕಾಲೇಜಿನಲ್ಲಿ ನಡೆಯಲಿರುವ “ಕನ್ನಡ ಸಾಹಿತ್ಯದಲ್ಲಿ ನೆಲೆಸಿರುವ ಚಿಂತನೆಗಳು” ವಿಚಾರ ಸಂಕಿರ್ಣ ಮುದ್ದಣ್ಣ ನೆನಪಿಗೆ ಸಮರ್ಪಣೆಯಾಗಲಿದೆ.

ಜಿನರಾಜ ಹೆಗ್ಡೆ ವೇದಿಕೆ : ಕಾಂತಾವರ ಬಾರಾಡಿ ಬೀಡಿನ ಜಿನರಾಜ ಹೆಗ್ಡೆಯವರು ಕರ್ನಾಟಕದ ಏಕೀಕರಣಕ್ಕಾಗಿ ಅವಿರತ ಹೋರಾಡಿದವರು ರಾಜಕಾರಣಿಯಾಗಿ ಭಾರತದ ಸಮಗ್ರತೆಗೆ ಹಗಲಿರುಳು ದುಡಿದ ಜಿನರಾಜ ಹೆಗ್ಡೆಯವರ ಗೌರವಾರ್ಥ ವಸ್ತು ಪ್ರದರ್ಶನದ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ವೇದಿಕೆಗೆ ಅವರ ಹೆಸರನ್ನು ಇಡಲಾಗಿದೆ. ಈ ವೇದಿಕೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ನಿರಂತರ ಕಾರ್ಯಕ್ರಮಗಳು ನಡೆಯಲಿದ್ದು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯಿAದ ಕಲಾಪ್ರಿಯರಿಗೆ ರಸದೌತಣ ಸಿಗಲಿದೆ.

ಅಡುಗೆ ಭೋಜಣ್ಣ ಆಹಾರ ಮಳಿಗೆ : ಅಡುಗೆ ಭೋಜಣ್ಣ ಎಂದೇ ಖ್ಯಾತರಾಗಿದ್ದ ಮುಡಾರು ಗ್ರಾಮದ ಭೋಜರಾಜ ಜೈನ್ ಬನ್ನಾಡಿ ಬಹುಬೇಡಿಕೆಯ ಪಾಕಶಾಸ್ತç ಪ್ರವೀಣರಾಗಿದ್ದರು. ಅದ್ಬುತವಾದ ಅಡುಗೆ ಕೌಶಲ್ಯವನ್ನು ಎಂದಿಗೂ ವ್ಯವಹಾರಿಕ ಲಾಭ ಪಡೆಯುವ ನಿಟ್ಟಿನಲ್ಲಿ ಉಪಯೋಗಿಸದೆ ಬಡವರ್ಗದ ಜನರೊಂದಿಗೆ ಮಾನವೀಯತೆ ಮೆರೆದ ಬೋಜಣ್ಣನಿಗೆ ಕೃತಜ್ಞತಾಪೂರ್ವಕವಾಗಿ ಸುಮಾರು ಇನ್ನೂರಕ್ಕೂ ಹೆಚ್ಚಿನ ವಿವಿಧ ಖಾದ್ಯಗಳ ಆಹಾರ ಮೇಳ ನಡೆಯಲಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.