



ನದಿಗೆ ಈಜಲು ತೆರಳಿದ್ದ ಇಬ್ಬರು ಉಪನ್ಯಾಸಕರು ನೀರು ಪಾಲಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್ (38) ಹಾಗೂ ಬಾಲಾಜಿ (36) ವೀಕೆಂಡ್ ಆದ ಕಾರಣ ನಿನ್ನೆ ಪ್ರವಾಸಕ್ಕಾಗಿ ತೆರಳಿದ್ದು, ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಮ್ ಸ್ಟೇನಲ್ಲಿ ತಂಗಿದ್ದರು.
ಇಂದು ತುಂಗಾ ನದಿಗೆ ಈಜಲು ಹೋಗಿದ್ದರು. ಈ ವೇಳೆ ನದಿಗೆ ಇಳಿದ ಇಬ್ಬರೂ ಮೇಲೆ ಬರದೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.