logo
WhatsApp Image 2026-04-02 at 14.46.04.jpeg
hindalco everlast.jpeg

ಬಾಲ್ಯದ ಪುಟ್ಟ ಪ್ರಪಂಚ ಮರೆಯಾಗಿದೆ

ಟ್ರೆಂಡಿಂಗ್
share whatsappshare facebookshare telegram
30 Apr 2024
post image

ಶ್ವೇತಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ

ಹಳ್ಳಿ ಬದುಕು ಎಷ್ಟು ಚಂದವೆಂದರೆ ಅದರ ಬಗ್ಗೆ ಹೇಳಲು ಪದಗಳೇ ಸಾಲದು ಹಳ್ಳಿಯಲ್ಲಿ ಬೆಳಗ್ಗೆ ಬೇಗ ಏಳುವುದೇ ಒಂದು ರೂಢಿ ಆಗಿರುತ್ತಿತ್ತು . ಕೋಳಿಯ ಒಂದು ಕೂಗು ಹಳ್ಳಿಯವರಿಗೆ ನಿತ್ಯದ ಅಲಾರಾಂ ಆಗಿರುತ್ತಿತ್ತು ಹಳ್ಳಿಯಲ್ಲಿ ಎಲ್ಲವೂ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯವಾಗುತ್ತಿತ್ತು. ದಿನನಿತ್ಯದ ಕೆಲಸಕ್ಕಿಂತ ಹೆಚ್ಚಿನ ಕೆಲಸವೇ ಇರುವುದು ಆ ಹಚ್ಚ ಹಸಿರು ಗಿಡ ಮರ ಗದ್ದೆ ತೋಟಗಳ ನಡುವೆ. ಮನೆ.... ತಂಪಾದ ವಾತಾವರಣ ಅದರ ಒಂದು ಖುಷಿಯೇ ಬೇರೆ. ದಿನನಿತ್ಯದ ಕೆಲಸಗಳನ್ನು ಮಾಡಿ ಸಂಜೆಯಾಗುತ್ತಲೇ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಹಾಡು ಹರಟೆ ಮಾಡುತ್ತಿದ್ದೆವು ಮನೆ ಎಂಬರಂಗಮಂದಿರದಲ್ಲಿ... ಮನರಂಜನೆಗೆ ನಾವೇ ಪಾತ್ರದಾರಿಗಳು ಬಳಿಕ ನಾವೇ ಪ್ರೇಕ್ಷಕರಾಗುತ್ತಿದ್ದೆವು ಅಜ್ಜಿ ಹೇಳಿದ ಕತೆ ಕೇಳುವುದು ಅದಕ್ಕೆ ತಲೆಯನ್ನು ಆಡಿಸುವುದು ...

ಅಜ್ಜಿ ಹೇಳಿದ ಕಥೆ ಕೇಳಿ ಕೇಳಿ ನಿದ್ದೆ ಬರುತ್ತಿತ್ತು ಆ ಕಥೆ ಪೂರ್ಣವಾಗುವ ಮುನ್ನ ನಿದ್ದಿಗೆ ಜಾರಿ ಬಿಡುತ್ತೇವೆ. ಬಳಿಕ ಮಾರನೆ ದಿನ ಮಗದೊಂದು ಕಥೆ ಈ ಹಿರಿಜೀವಗಳು ಅದೆಷ್ಟೋ ಎಳೆ ಮನಸ್ಸಿನ ಕಲ್ಪನಾ ಲೋಕದ ಕಣ್ಣು ತೆರೆಸಿದ್ದಾರೆ ಎನ್ನಬಹುದು. ಹಳ್ಳಿಯಲ್ಲಿ ಹಬ್ಬವೆಂದರೆ ಸಾಕು ಖುಷಿ ಅಕ್ಕ ಪಕ್ಕದ ಮನೆಯವರು ಸೇರಿ ಹಬ್ಬವನ್ನು ಆಚರಣೆ ಮಾಡುವ ಸಂತಸವೇ ಬೇರೆ ಅದರಲ್ಲಿ ಸ್ವಲ್ಪ ದುಃಖ ನೋವು ಯಾವ ಮನೆಯಲ್ಲಿಯೂ ಯಾವ ಸಂದರ್ಭದಲ್ಲಿಯು ಸಹಜ ಅದಕ್ಕೆ ಹೊಂದಿಕೊಂಡು ಹೋಗುವುದು ನಮ್ಮ ಗುಣ. ನಮಗೆ ಬೇಸಿಗೆ ರಜೆ ಸಿಕ್ಕರೆ ಸಾಕು ಅಜ್ಜಿ ಮನೆಗೆ ಓಡಿ ಬರುತ್ತಿದ್ದೆವು ಅಕ್ಕಪಕ್ಕದ ಮನೆಯವರು ಸೇರಿ ಮನೆ ಹಿಂದೆ ಮನೆಯನ್ನು ನೋಡಲು ಸಿಗುತ್ತಿತ್ತು ಆ ಮನೆಯನು ನೋಡುವುದೇ ಒಂದು ಸಂಭ್ರಮವಾಗಿತ್ತು ಹಳ್ಳಿಯಾಟದ ಗೌಜು ಮತ್ತು ಚಂದ. ಈ ಪುಟ್ಟ ಮನೆಯಲ್ಲಿ ಮಕ್ಕಳದ್ದೆ ಅಡುಗೆ ಯಾವುದೂ ಕಸ,ಕಡ್ಡಿ ,ಮಣ್ಣುಎಲ್ಲದರ ಒಟ್ಟಿಗೆ ಮಾಡುವ ಅಡುಗೆ ತಿನ್ನಲು ರುಚಿ ಇಲ್ಲದೆ ಹೋದರು ಖುಷಿಯ ಸಡಗರ ತುಂಬಿ ಹರಿಯುತ್ತಿತ್ತು. ಆ ಮನೆಯಲ್ಲಿ ಮಕ್ಕಳದ್ದೆ ಪುಟ್ಟ ಪ್ರಪಂಚ ..... ಆ ಮನೆಯಲ್ಲಿ ನಾವೇ ದೊಡ್ಡವರು ಅವರಿಗೆ ದೊಡ್ಡವರಾದ ಮೇಲೆ ಹಾಗೆ ಹೀಗೆ ಇರಬೇಕು ಎಂಬ ಕನಸು ಅವರದಾಗಿರುತ್ತದೆ ಆದರೆ ಅವರು ನನಸು ಮಾಡದೆ ಇದ್ದರೂ ಈ ಚಿಕ್ಕ ವಯಸ್ಸಿನಲ್ಲಿಯೇ ಅ ಕನಸಿನ ಕಲ್ಪನೆಯನ್ನು ಪೂರೈಸಿಕೊಳ್ಳುತ್ತಾರೆ ಚಿಕ್ಕ ವಯಸ್ಸಿನಲ್ಲಿ ನಮಗೆ ಯಾವುದೇ ನೋವು ದುಃಖ ಎಂಬ ಕಲ್ಪನೆಯೇ ಇರುವುದಿಲ್ಲ ಹಳ್ಳಿಯಲ್ಲಿ ನಮ್ಮ ಬಾಲ್ಯದ ಪುಟ್ಟ ನೆನಪು ಮರೆಯಾಗಿದೆ ಅದನ್ನು ಇನ್ನು ಕನಸಿನ ಲೋಕದಲ್ಲಿ ಕಾಣಬೇಕು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.