



ಲಾಲಜಿಮೆಂಡನ್ ಕರೋನ ಸಂದಿಗ್ದ ಪರಿಸ್ಥಿತಿಯಲ್ಲಿಯು ಕ್ಷೇತ್ರದ ಅಭಿವೃದ್ಧಿ ಗೆ ಶ್ರಮಿಸಿದವರು,ಕಾಪು ಕ್ಷೇತ್ರ ಮಾದರಿ ಕ್ಷೇತ್ರ ವಾಗಿ ಬೆಳೆಯುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಅನುದಾನವನ್ನು ಬಳಸಿ ಕ್ಷೇತ್ರದ ಅಭಿವೃದ್ಧಿ ಮಾಡುತಿದ್ದಾರೆ.ಈ ನಡುವೆ ವಿನಯ ಕುಮಾರ್ ಸೊರಕೆಯವರು ಕಾಪು ಮಿನಿವಿಧಾನಸೌಧ ಶಿಲಾನ್ಯಾಸದ ಸಂದರ್ಭದಲ್ಲಿ ಹಾಗೂ ಬೆಳಕು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉದ್ಘಾಟನೆಯ ಸಂದರ್ಭದಲ್ಲಿ ಹೈಡ್ರಾಮಾ ಸೃಷ್ಟಿಸಿ ನಗೆಪಾಟಲಿಗೀಡಾಗಿದ್ದನ್ನು ಜನರು ಇನ್ನೂ ಮರೆತಿಲ್ಲ, ಸೊರಕೆಯವರು ಶಾಸಕ ಹಾಗೂ ಸಚಿವರಾಗಿದ್ದ ಸಮಯದಲ್ಲಿ ಕ್ಷೇತ್ರದ ಆಡಳಿತವು ವಿಫಲವಾಗಿದ್ದು ಹಾಗೂ ಹಾಗೂ ಯಾವುದೇ ದೂರದೃಷ್ಟಿಯಿಲ್ಲದೇ ಪೂರಕ ಅನುದಾನವಿಲ್ಲದೆ ಕೇವಲ ಪ್ರಚಾರಕ್ಕಾಗಿ ಯೋಜನೆಗಳನ್ನು ಶಿಫಾರಸು ಮಾಡಿದ್ದು, ಈಗಿನ ಶಾಸಕರಾಗಿರುವ ಲಾಲಾಜಿ ಮೆಂಡನ್ ರವರು ಮೊದಲು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಂದ ಹತ್ತು ಹಲವು ಶಾಶ್ವತ ಯೋಜನೆಗಳನ್ನು ಅನುಷ್ಠಾನಿಸುವ ಕಾರ್ಯ ದಲ್ಲಿ ನಿರತರಾಗಿದ್ದಾರೆ, ಆದರೆ ಸೊರಕೆಯವರು ಬರಿ ಪತ್ರದ ಮೂಲಕ ಯೋಜನೆಗಳನ್ನು ತಾನೇ ಮಾಡಿದಂತೆ ಎಂದು ಬಿಂಬಿಸುತ್ತಿರುವುದು ವಿಪರ್ಯಾಸ, ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸಿಕೊಳ್ಳಲಾಗದೆ ಹಾಗೂ ಶಾಸಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೀಳುಮಟ್ಟಕ್ಕೆ ಇಳಿದಿರುದು,ಎಲ್ಲರೂ ತನ್ನಂತೆಯೆ ಇರುತ್ತಾರೆ ಎಂದು ಭಾವಿಸಿರುವುದು ಅವರ ಮನಸ್ಥಿತಿಯ ಸೂಚಕವಾಗಿದೆ. ಕಾಪು ಕ್ಷೇತ್ರದ ಜನ ಸದಾ ಶಾಸಕರ ಜೊತೆಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚದ ಅಧ್ಯಕ್ಷ ಸಂತೊಷ್ ಕುಮಾರ್ ಮೂಡುಬೆಳ್ಳೆ , ವಿನಯ್ ಕುಮಾರ್ ಸೊರಕೆಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.