



ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ತಿಂಗಳು ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ಇದರ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ದಾಖಲೆಯ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 221 ಮಿಮೀ ಮಳೆಯ ನಿರೀಕ್ಷೆ ಇತ್ತು, ಆದರೆ ಇಂದಿನವರೆಗೂ 271 ಮಿಮೀ ಮಳೆಯಾಗಿದೆ. ಹವಮಾನದಲ್ಲಿನ ಬದಲಾವಣೆ ಹಾಗೂ ಶಿಯರ್ ಜೋನ್. ಸಮುದ್ರಮಟ್ಟದಿಂದ ಶಿಯಾರ್ ಜೋನ್ ಎತ್ತರವಿದ್ದಾಗ ಈ ರೀತಿಯಾಗಿ ಮಳೆಯಾಗುತ್ತದೆ. ಶಿಯರ್ ಜೋನ್ ಅಂದರೆ ಸಮುದ್ರಮಟ್ಟದಿಂದ 11 ಡಿಗ್ರಿ ಅಕ್ಷಾಂಶದಿಂದ ಪೂರ್ವದಿಕ್ಕಿಗೆ ಹೆಚ್ಚಿನ ಗಾಳಿ ಬೀಸುತ್ತದೆ. ಇದೇ ವೇಳೆ ಕಡಿಮೆ ಅಕ್ಷಾಂಶದಲ್ಲಿ 9 ಅಥವಾ 8 ರ ವೇಗದಲ್ಲಿ ಪಶ್ಚಿಮ ವಲಯದಲ್ಲಿ ಗಾಳಿಬೀಸಿದಾಗ ಗುಡುಗು ಮಿಂಚು ಸಹಿತ ಮಳೆಯಾಗುತ್ತದೆ.ಎಂದು ಹವಾಮಾನ ಇಲಾಖೆ ತಿಳಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.