logo
WhatsApp Image 2026-04-02 at 14.46.04.jpeg
hindalco everlast.jpeg

ಜು.20ರೊಳಗೆ ಪ್ರಕಟಗೊಳ್ಳಲಿದೆ ನೀಟ್ ಫಲಿತಾಂಶ

ಟ್ರೆಂಡಿಂಗ್
share whatsappshare facebookshare telegram
3 Jul 2026
post image

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ ಮರುಪರೀಕ್ಷೆ ಫಲಿತಾಂಶ ಇದೇ ಜು.20ರೊಳಗೆ ಪ್ರಕಟಗೊಳ್ಳಲಿದೆ ಎಂದು ಎನ್ಟಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಜೂ.21ರಂದು ನಡೆಸಲಾಗಿದ್ದ ನೀಟ್ ಮರುಪರೀಕ್ಷೆಯ ಫಲಿತಾಂಶಕ್ಕಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇದರ ನಡುವೆ ಮಹತ್ವದ ಅಪ್ಡೇಟ್ ಹೊರಬಿದ್ದಿದ್ದು, ಜು.20ರೊಳಗೆ ಪ್ರಕಟಗೊಳ್ಳಲಿದೆ. ಆದರೆ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಸಾಮಾನ್ಯವಾಗಿ 45 ದಿನ ತಗಲುವ ಪ್ರಕ್ರಿಯೆಯನ್ನು ಈ ಬಾರಿ ಕೇವಲ 37 ದಿನಗಳಲ್ಲಿ ಮುಗಿಸಲು ಎನ್ಟಿಎ ಸಿದ್ಧತೆ ನಡೆಸಿದೆ. ಜೂನ್ 25 ರಂದು ಬಿಡುಗಡೆಯಾಗಿದ್ದ ತಾತ್ಕಾಲಿಕ ಕೀ ಉತ್ತರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಸುಮಾರು 10,000 ಆಕ್ಷೇಪಣೆಗಳು ಬಂದಿವೆ. ಅಧಿಕಾರಿಗಳು ಪ್ರತಿಯೊಂದು ಆಕ್ಷೇಪಣೆಯನ್ನು ಮತ್ತು ಅದಕ್ಕೆ ನೀಡಲಾದ ಪುರಾವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ನಂತರವೇ ಅಂತಿಮ ಕೀ ಉತ್ತರ ಮತ್ತು ರಿಸಲ್ಟ್ ಹೊರಬರಲಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.