



ನವದೆಹಲಿ: ದೇಶದಲ್ಲಿ ಹೊಸ ಟೋಲ್ ನೀತಿ ಅಳವಡಿಸಲು ಕೇಂದ್ರ ಮುಂದಾಗಲಿದೆ. ಹೆಚ್ಚು ಭಾರದ ವಾಹನಗಳಿಂದ ರಸ್ತೆಗಳು ವೇಗವಾಗಿ ಸವೆದುಹೋಗುತ್ತಿರುವುದು ಕೂಡ ಸರ್ಕಾರ ಈ ಕ್ರಮ ಕೈಗೊಳ್ಳಲು ಒಂದು ಕಾರಣ ಎನ್ನಲಾಗಿದೆ. ಕೇಂದ್ರ ಸಾರಿಗೆ ಸಚಿವಾಲಯವು ಈ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸುತ್ತಿದ್ದು, ದೆಹಲಿ-ಮುಂಬೈ ಕಾರಿಡಾರ್ ಸೇರಿದಂತೆ ಮುಂಬರುವ ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ವೇ ಯೋಜನೆಗಳಲ್ಲಿ ಈ ಹೊಸ ಟೋಲ್ ನೀತಿಯನ್ನು ಅಳವಡಿಸುವ ಸಾಧ್ಯತೆ ಇದೆ. ಟೋಲ್ ದರ ನಿಗದಿಪಡಿಸುವ ಸಂಬಂಧ ಸಾರಿಗೆ ಸಚಿವಾಲಯವು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಚ್ ಯುು)-ವಾರಾಣಸಿಯ ನೆರವು ಕೋರಿದೆ ಪ್ರಸ್ತುತವಿರುವ ಟೋಲಿಂಗ್ ನೀತಿಯು ವಾಹನವು ಹೊಂದಿರುವ ಚಕ್ರಗಳನ್ನು ಆಧರಿಸಿದೆ. ಆದರೆ ಹೊಸ ನೀತಿ ಅಡಿಯಲ್ಲಿ ಹೆದ್ದಾರಿಗಳಲ್ಲಿ ವಾಹನವು ಕ್ರಮಿಸುವ ನಿಜವಾದ ಸಮಯ ಮತ್ತು ದೂರ ಗಾತ್ರ ಮತ್ತು ತೂಕವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಾಹನವು ಹೆದ್ದಾರಿಯಲ್ಲಿ ಎಷ್ಟು ಜಾಗವನ್ನು ಆಕ್ರಮಿಸುತ್ತದೆ ಮತ್ತು ರಸ್ತೆಯ ಮೂಲಸೌಕರ್ಯಗಳ ಮೇಲೆ ಎಷ್ಟು ಭಾರ ಇರಿಸುತ್ತದೆ ಎಂಬುದನ್ನು ಸಹ ಲೆಕ್ಕಾಚಾರ ಹಾಕಿ ಟೋಲ್ ವಿಧಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ
ವಾಹನದ ಗಾತ್ರ ಮತ್ತು ರಸ್ತೆ ಮೂಲಸೌಕರ್ಯಗಳ ಮೇಲಿನ ವಾಹನದ ಸಂಭಾವ್ಯ ಒತ್ತಡ ಆಧರಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾವತಿಸುವ ಟೋಲ್ ಮೊತ್ತವನ್ನು ನಿರ್ಧರಿಸಬಹುದಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.