


ಉಡುಪಿ: ನಗರದ ಸಿ.ಬಿ. ರಸ್ತೆಯಲ್ಲಿ 1935ರಲ್ಲಿ ಆರಂಭಗೊಂಡ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ಅತ್ಯಾಧುನಿಕ ವಿನ್ಯಾಸದೊಂದಿಗೆ ನವೀಕೃತಗೊಂಡಿದ್ದು, ಬುಧವಾರ ಗ್ರಾಹಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಪುನರಾರಂಭಗೊಂಡಿತು. ಆಭರಣ ಜುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್‌ನ ಮೊದಲ ಮಳಿಗೆಯಾಗಿರುವ ಈ ಶೋರೂಂ, ಒಂಬತ್ತು ದಶಕಗಳಿಗೂ ಮೀರಿದ ಸಂಸ್ಥೆಯ ಇತಿಹಾಸ ಮತ್ತು ಪರಂಪರೆಯ ಪ್ರತೀಕವಾಗಿದೆ. ಸಂಸ್ಥೆಯ ಪ್ರಧಾನ ಕಚೇರಿಯೂ ಆಗಿರುವ ಈ ಮಳಿಗೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಲಾಗಿದ್ದು, ಗ್ರಾಹಕರಿಗೆ ವಿಶಿಷ್ಟ ಖರೀದಿ ಅನುಭವ ಒದಗಿಸುವಂತೆ ರೂಪಿಸಲಾಗಿದೆ.

ಗಣ್ಯರಿಂದ ದೀಪ ಪ್ರಜ್ವಲನೆ:
ನವೀಕೃತ ಶೋರೂಂ ಅನ್ನು ಗೀತಾ ಪೈ, ಸುಮನಾ ಪ್ರಭು, ಶಾಲಿನಿ ಜಿ. ಶಂಕರ್, ಸಂಧ್ಯಾ ಪೈ, ರೋಹಿಣಿ ಶೆಣೈ, ನಟ ಅಂಕಿತ್ ಅಮರ್, ಲತಾ ಹೆಗ್ಡೆ, ಗೀತಾ ಹೆಗ್ಡೆ ಹಾಗೂ ಆಭರಣ ಜುವೆಲ್ಲರ್ಸ್ ಅಧ್ಯಕ್ಷ ಮಧುಕರ್ ಎಸ್. ಕಾಮತ್ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗಣ್ಯರು, ಹಿತೈಷಿಗಳು ಮತ್ತು ಗ್ರಾಹಕರು ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್, ನಿರ್ದೇಶಕರಾದ ಮಹೇಶ್ ಎಂ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್, ಡಾ. ಅರುಣ್ ಕುಡ್ವ, ಕ್ಷಮಾ ಕುಡ್ವ, ಸಾತ್ವಿಕ್ ಎಸ್. ಕಾಮತ್, ಆಕರ್ಷ್ ಎಂ. ಕಾಮತ್, ಶ್ಲೋಕಾ ಕಾಮತ್, ಅದಿತ್ರಿ ಕಾಮತ್ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಚಿನ್ನಾಭರಣಗಳ ವೈವಿಧ್ಯಮಯ ಸಂಗ್ರಹ:
ನವೀಕೃತ ಶೋರೂಂ ಎರಡು ಮಹಡಿಗಳಲ್ಲಿ ವಿನ್ಯಾಸಗೊಂಡಿದ್ದು, ವಿವಿಧ ಶೈಲಿ ಮತ್ತು ಸಂಪ್ರದಾಯಗಳ ಆಭರಣಗಳಿಗೆ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. ನೆಲ ಮಹಡಿಯಲ್ಲಿ ವೆಡ್ಡಿಂಗ್ ಕಲೆಕ್ಷನ್, ಹೆರಿಟೇಜ್ ಹಾಗೂ ಜೆಮ್‌ಸ್ಟೋನ್ ವಿಭಾಗಗಳಿದ್ದು, ಮೊದಲ ಮಹಡಿಯಲ್ಲಿ ಪ್ರಿಟ್ಟಿ, ನಿಯೋಲೈಟ್ ಮತ್ತು ಸಮಕಾಲೀನ ವಿನ್ಯಾಸಗಳ ಕಲೆಕ್ಷನ್‌ಗಳನ್ನು ಪರಿಚಯಿಸಲಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳ ವೈವಿಧ್ಯಮಯ ಸಂಗ್ರಹವನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಶೋರೂಂನ ವಿವಿಧ ವಿಭಾಗಗಳನ್ನು ಗಣ್ಯರು ಉದ್ಘಾಟಿಸಿದರು. ಉದ್ಯಮಿ ಪುರುಷೋತ್ತಮ್ ಪಿ. ಶೆಟ್ಟಿ ವೆಡ್ಡಿಂಗ್ ಕಲೆಕ್ಷನ್, ರಂಜನಾ ಶೆಟ್ಟಿ ರೂಬಿ ವಿಭಾಗ, ಡಾ. ಭಾರ್ಗವಿ ಐತಾಳ್ ಸಾಂಪ್ರದಾಯಿಕ ಆಭರಣ ವಿಭಾಗ ಹಾಗೂ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಹೆರಿಟೇಜ್ ವಿಭಾಗವನ್ನು ಉದ್ಘಾಟಿಸಿದರು. ವಿಮಲಾ ನಾಯಕ್ ಸಮಕಾಲೀನ ಆಭರಣ ವಿಭಾಗ, ಸತೀಶ್ ಪೈ ನಿಯೋಲೈಟ್ ವಿಭಾಗವನ್ನು ಉದ್ಘಾಟಿಸಿದರು. ನಿಯೋಲೈಟ್ ಆಭರಣಗಳನ್ನು ಶೋಭಾ ಸುಖಾನಂದ ಶೆಣೈ ಅನಾವರಣಗೊಳಿಸಿದರು. ಉದ್ಯಮಿ ಕೋಮಲ್ ಪ್ರಭು, ದೀಪಾ ಪೈ ಮತ್ತು ಮೀನಾ ಲಕ್ಷ್ಮೀಣಿ ಮಹಾರಾಷ್ಟ್ರ ಶೈಲಿಯ ಆಭರಣ ವಿಭಾಗವನ್ನು ಹಾಗೂ ವಿಜಯಲಕ್ಷ್ಮೀ ಸೂಡಾ ಪ್ರಿಟ್ಟಿ ಕಲೆಕ್ಷನ್ ಅನ್ನು ಅನಾವರಣಗೊಳಿಸಿದರು.
ಗ್ರಾಹಕರ ವಿಶ್ವಾಸವೇ ಬೆಳವಣಿಗೆಯ ಶಕ್ತಿ: ಸುಭಾಸ್ ಎಂ. ಕಾಮತ್
ಆಭರಣ ಜುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್ ಮಾತನಾಡಿ, “ಸಿ.ಬಿ. ರಸ್ತೆಯ ಮೂಲ ಮಳಿಗೆ ಹೊಸ ರೂಪದಲ್ಲಿ ಪುನರಾರಂಭಗೊಂಡಿರುವುದು ಹೆಮ್ಮೆಯ ಕ್ಷಣ. ತಲೆಮಾರುಗಳಿಂದ ಈ ಮಳಿಗೆ ಉಡುಪಿಯ ವಾಣಿಜ್ಯ ಮತ್ತು ಸಾಂಸ್ಕೃತಿಕ ಬದುಕಿನೊಂದಿಗೆ ಬೆಸೆದುಕೊಂಡಿದೆ. ಗ್ರಾಹಕರು ಹಾಗೂ ಹಿತೈಷಿಗಳು ತೋರಿದ ನಿರಂತರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದರು. ಸಂಸ್ಥೆಯ ನಿರ್ದೇಶಕ ಮಹೇಶ್ ಎಂ. ಕಾಮತ್ ಮಾತನಾಡಿ, “ವಿವಿಧ ಆಭರಣ ಸಂಗ್ರಹಗಳ ವೈಶಿಷ್ಟ್ಯವನ್ನು ಹೆಚ್ಚಿಸುವುದರ ಜತೆಗೆ ಗ್ರಾಹಕರು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಮದುವೆಯ ಆಭರಣಗಳಿಂದ ಹಿಡಿದು ಹೆರಿಟೇಜ್, ಜೆಮ್‌ಸ್ಟೋನ್ ಮತ್ತು ಸಮಕಾಲೀನ ವಿನ್ಯಾಸಗಳವರೆಗೆ ವೈವಿಧ್ಯಮಯ ಸಂಗ್ರಹಗಳನ್ನು ಒಂದೇ ಸೂರಿನಡಿ ಪರಿಚಯಿಸಲಾಗಿದೆ” ಎಂದು ತಿಳಿಸಿದರು.
ಗುಣಮಟ್ಟಕ್ಕೆ ಆದ್ಯತೆ:
1935ರಲ್ಲಿ ಉಡುಪಿಯ ಸಿ.ಬಿ. ರಸ್ತೆಯಲ್ಲಿ ಒಂದೇ ಮಳಿಗೆಯೊಂದಿಗೆ ಆರಂಭವಾದ ‘ದ ಒರಿಜಿನಲ್ ಆಭರಣ’ ಸಂಸ್ಥೆಯು ಅಧ್ಯಕ್ಷ ಮಧುಕರ್ ಎಸ್. ಕಾಮತ್ ಅವರ ದೂರದೃಷ್ಟಿ ಮತ್ತು ಗ್ರಾಹಕರ ವಿಶ್ವಾಸದ ಬಲದಿಂದ ವಿಸ್ತರಿಸಿದೆ. ಪ್ರಸ್ತುತ ಕರ್ನಾಟಕ ಮತ್ತು ಗೋವಾದ ಎಂಟು ಜಿಲ್ಲೆಗಳಲ್ಲಿ 17 ಸ್ಥಳಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನ ಜಯನಗರದ ಐದನೇ ಬ್ಲಾಕ್‌ನಲ್ಲಿಯೂ ಸಂಸ್ಥೆಯ ಅಧಿಕೃತ ಮಳಿಗೆ ಕಾರ್ಯನಿರ್ವಹಿಸುತ್ತಿದೆ. ಒಂಭತ್ತು ದಶಕಗಳ ಪರಂಪರೆಯನ್ನು ಹೊಂದಿರುವ ಸಂಸ್ಥೆಯು ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ, ಅತ್ಯುತ್ತಮ ಕರಕುಶಲತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡಿದೆ.



ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.