



ಕಾರ್ಕಳ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ತಮ್ಮನು ಅಣ್ಣನನ್ನು ಚೂರಿ ಇರಿದು ಹತ್ಯೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ.ಶೇಖರ್ ಕೊಲೆಯಾದವರು ,ಜಾಗದ ತಕರಾರಿನ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಶೇಖರ್ ಮತ್ತು ರಾಜು ಪ್ರತ್ಯೇಕ ವಾಗಿ ವಾಸವಾಗಿದ್ದರು. ತನ್ನ ತಾಯಿಗೆ ಬಂದಿದ್ದ ಜಾಗದಲ್ಲಿ ಶೇಖರ್ ವಾಸವಾಗಿದ್ದು. ಈ ಹಿನ್ನೆಲೆಯಲ್ಲಿ ವೈಮನಸ್ಸಿನಿಂದ ತಮ್ಮ ಶೇಖರ್ ಪ್ರತ್ಯೇಕ ಮನೆ ಮಾಡಿದ್ದರು. ರವಿವಾರ ಶೇಖರ್ ಮನೆಯಲ್ಲಿ ಇತರ ಮೂರು ಜನ ರು ಸೇರಿಕೊಂಡು ಮನೆಯ ಕಾಮಗಾರಿ ಸಮಯದಲ್ಲಿ ಮದ್ಯಪಾನ ಮಾಡಿಕೊಂಡು ಬಂದ ರಾಜು, ಶೇಖರನ್ನು ಕೆಲಸಕ್ಕೆ ಆಕ್ಷೇಪಿಸಿ ಚೂರಿಯಿಂದ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ .ಎಂದು ಆರೋಪಿಸಿದ್ದಾರೆ .ಕಾರ್ಕಳ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.