logo
WhatsApp Image 2026-04-02 at 14.46.04.jpeg
hindalco everlast.jpeg

ರಾಜ್ಯದಲ್ಲಿ ಮತ್ತೆ ಏರಿಕೆಕಂಡ ಚಿನ್ನದ ದರ

ಟ್ರೆಂಡಿಂಗ್
share whatsappshare facebookshare telegram
5 Jul 2023
post image

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಇಳಿಮುಖ ಕಾಣುತ್ತಿದ್ದ ಚಿನ್ನದ ದರ ಇಂದು ಅಂದರೆ ಬುಧವಾರ (ಜುಲೈ 5) ರಂದು ತುಸು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಆಷಾಡ ಮುಗಿದ ಬಳಿಕ ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆಯೂ ಇದೆ. ಇಂದು ಚಿನ್ನದ ದರ ತುಸು ಏರಿಕೆ ಕಂಡರೂ, ಬೆಳ್ಳಿ ದರ ಇಳಿಕೆ ಕಂಡಿದೆ.

ಕರ್ನಾಟಕದಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ದರ ತುಸು ಏರಿಕೆ ಕಂಡಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,415 ರೂ ಇದೆ. ನಿನ್ನೆಯ 5,405 ರೂ ದರಕ್ಕೆ ಹೋಲಿಸಿದರೆ 10 ರೂ. ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,320 ರೂ ಆಗಿದೆ. ನಿನ್ನೆ 43,240 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 80 ರೂ., ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,150 ರೂ. ಇದೆ. ನಿನ್ನೆಯ 54,050 ರೂ. ಗೆ ಹೋಲಿಸಿದರೆ 100 ರೂ., ಏರಿಕೆಯಾಗಿದೆ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,906 ರೂ. ಇದೆ. ನಿನ್ನೆಯ 5,896 ರೂ.ಗೆ ಹೋಲಿಸಿದರೆ 10 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,248 ರೂ. ನೀಡಬೇಕಾಗುತ್ತದೆ. ನಿನ್ನೆ 47,168 ರೂ. ಇತ್ತು. ಇಂದು 80 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,060 ರೂ. ಇದೆ. ನಿನ್ನೆಯ 58,960 ರೂ. ಗೆ ಹೋಲಿಸಿದರೆ 100 ರೂ. ಇಳಿಕೆಯಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.