logo
WhatsApp Image 2026-04-02 at 14.46.04.jpeg
hindalco everlast.jpeg

ಪಿತ್ರಾರ್ಜಿತ ಆಸ್ತಿ ಲಪಟಾಯಿಸುವ ಉದ್ದೇಶ : ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಟ್ರೆಂಡಿಂಗ್
share whatsappshare facebookshare telegram
2 May 2022
post image

ಕಾರ್ಕಳ : ಪಿತ್ರಾರ್ಜಿತವಾಗಿ ಸೇರಬೇಕಾದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ನಾಲ್ವರು ಸಹೋದರಿಯರಿದ್ದರು ತಂದೆ ತಾಯಿಗೆ ಒಬ್ಬನೇ ಮಗ ಎಂದು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಬಗ್ಗೆ ಸೂಡ ಗ್ರಾಮದ ಶಂಕರ ಮೇರ ಎಂಬಾತನ ವಿರುದ್ಧ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗೀರತಿ ಎಂಬುವರು ತಮ್ಮ ಶಂಕರ ಮೇರ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಕಾರ್ಕಳದ ಮಾಯಿಲ ಅಸ್ಲರ್ ಯಾನೆ ಮಾಯಿಲ ಮೇರ ಇವರಿಗೆ ಗುಲಾಭಿ, ಭವಾನಿ,ವಿನೋದ, ಭಾಗೀರತಿ ಹಾಗೂ ಶಂಕರ ಮೇರ ಎಂಬ ಐದು ಜನ ಮಕ್ಕಳಿದ್ದು,ಇವರು ಕಾರ್ಕಳದ ಸೂಡ ಗ್ರಾಮದಲ್ಲಿ ಸರ್ವೇ ನಂಬರ್ 224 /1 ರಲ್ಲಿ ಎಕರೆ 26 ಸೆಂಟ್ಸ್ ಜಾಗ ಹೊಂದಿದ್ದರು.ಇವರು ತಮ್ಮ ಆಸ್ತಿಗೆ ಸಂಬಂಧಿಸಿ ಜೀವಿತಾವಧಿಯಲ್ಲಿ ಯಾವುದೇ ರಿಜಿಸ್ಟ್ರಿ ದಾಖಲೆಗಳನ್ನು ಮಾಡಿರುವುದಿಲ್ಲ. ಇವರ ಮರಣಾನಂತರ ಇವರ ಮಗನಾದ ಶಂಕರ ಮೇರ ತಂದೆ ತಾಯಿಗೆ ತಾನೊಬ್ಬನೇ ಮಗನೆಂದು ನಕಲಿ ದಾಖಲೆ ಸೃಷ್ಟಿಸಿ ತಂದೆಯಿಂದ ಬರಬೇಕಿದ್ದ ಆಸ್ತಿಯನ್ನು ಒಬ್ಬನೇ ಹಕ್ಕುದಾರನನ್ನಾಗಿ ಬಿಂಬಿಸಿದ್ದಾನೆ.ಹಾಗೂ ಈತನ ಈ ಕೃತ್ಯಕ್ಕೆತಂದೆಯ ಅವಧಿಯಲ್ಲಿ ಗ್ರಾಮಕರಣಿಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇವರ ಕುಟುಂಬಕ್ಕೆ ಆಪ್ತರೆನಿಕೊಂಡಿದ್ದ ಗ್ರಾಮ ಸಹಾಯಕರಾದ ರಮೇಶ್ ಅವರು ಕುಟುಂದ ಬಗ್ಗೆ ಎಲ್ಲ ಮಾಹಿತಿ ಇದ್ದರು ಕೂಡ ಶಂಕರ ಮೇರ ಅವರಿಗೆ ನಕಲಿ ದಾಖಲೆ ಸೃಷ್ಟಿಸುವಲ್ಲಿ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆಮಾಯಿಲ ಮೇರ ಮತ್ತು ನರ್ಸಿ ಮೊಸೆರ್ಸಿ ದಂಪತಿಗೆ ಶಂಕರ ಮೇರ ಒಬ್ಬನೇ ಮಗನೆಂದು ಪ್ರಮಾಣ ಪತ್ರ ನೀಡುವಲ್ಲಿ ಸ್ಥಳೀಯರಾದ ಬೆಂಜಮಿನ್ ಡಿಸೋಜ ಸೂಡ,ಜಯರಾಮ್ ಶೆಟ್ಟಿ ಸೂಡ, ಸೂರಜ್ ಕುಲಾಲ್ ಸೂಡ, ಚಂದ್ರಕಲಾ ಜೋಗಿ ಸೂಡ,ರಮೇಶ ಜೋಗಿ ಸೂಡ ಅವರು ಸಹಿ ಹಾಕಿ ಸುಳ್ಳು ಸಾಕ್ಷಿ ನೀಡುವ ಮೂಲಕ ಸುಳ್ಳು ದಾಖಲೆ ಮಾಡಲು ಸಹಕರಿಸಿ ಪಂಚನಾಮೆಗೆ ಸಹಿ ಹಾಕಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಭಾಗೀರತಿ ಅವರು ದಾಖಲೆಗಳನ್ನು ತಾಲೂಕು ಕಚೇರಿಯಿಂದ ತೆಗೆಸಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.ಆರೋಪಿಗಳ ವಿದುದ್ದ ಸೂಕ್ತ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.