



ನವದೆಹಲಿ:ಮಗನಿಗೆ 18 ವರ್ಷವಾಗಲಿ ಅಥವಾ ಮೇಜರ್ ಆಗಲಿ ತಂದೆ ತನ್ನ ಕರ್ತವ್ಯಗಳಿಂದ ಓಡಿಹೋಗಬಾರದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಮಗುವಿಗೆ ಶಿಕ್ಷಣ ನೀಡುವ ಜವಾಬ್ದಾರಿ ತಂದೆಯ ಮೇಲೆ ಶಾಶ್ವತವಾಗಿರುತ್ತದೆ ಮತ್ತು ಆರ್ಥಿಕ ಹೊರೆ ತಾಯಿಯ ಮೇಲೆ ಹೇರಬಾರದು. ದೆಹಲಿ ಮೂಲದ ದಂಪತಿ ವಿಚ್ಛೇದನ ಪಡೆದ ನಂತರ ತಂದೆ ತನ್ನ ಮಗನ ಶಿಕ್ಷಣಕ್ಕಾಗಿ ತಿಂಗಳಿಗೆ 15,000 ರೂ.ನೀಡಬೇಕು ಎಂದಿದೆ.
ದಿನದಿಂದ ದಿನಕ್ಕೆ ಜೀವನಾಶ್ಯಕ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದೆ. ಈ ವಿಚಾರದ ಬಗ್ಗೆ ಹೈಕೋರ್ಟ್ ಕುರುಡಾಗಿರಲು ಸಾಧ್ಯವಿಲ್ಲ. ವಿಚ್ಛೇದಿತ ಪತಿ ನೀಡುತ್ತಿರುವ ಸಣ್ಣಮೊತ್ತದಿಂದ ಆಕೆಯು ಜೀವನ ಸಾಗಿಸುವುದರ ಜೊತೆಗೆ ಮಗನ ವಿದ್ಯಾಭ್ಯಾಸಕ್ಕೂ ಹಣ ಹೊಂದಿಸುವುದು ಕಷ್ಟ. 2018ರಲ್ಲಿ ಅಧೀನ ನ್ಯಾಯಾಲಯವೊಂದು ಇಬ್ಬರು ಮಕ್ಕಳ ಯೋಗಕ್ಷೇಮಕ್ಕೆ ಮಾತ್ರವೇ ಪರಿಹಾರ ಹಣ ಮಂಜೂರು ಮಾಡಿ, ತನ್ನ ಬದುಕು ನಿರ್ಲಕ್ಷಿಸಿದ ಬಗ್ಗೆ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆಯು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ₹ 60 ಸಾವಿರ ವೇತನ ಪಡೆಯುತ್ತಿದ್ದಾರೆ. ಈಕೆಯ ವಿಚ್ಛೇದಿತ ಪತಿಯು ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಪ್ರಕಾರ ತಿಂಗಳಿಗೆ ₹ 1.67 ಲಕ್ಷ ವೇತನ ಪಡೆಯುತ್ತಿದೆ. ವಿಚ್ಛೇದಿತ ಪತಿಯು ಮತ್ತೊಂದು ಮದುವೆಯಾಗಿದ್ದು, ಎರಡನೇ ಮದುವೆಯಲ್ಲಿಯೂ ಒಂದು ಮಗು ಪಡೆದಿದ್ದಾರೆ. ಹಾಗೆಂದು ಮೊದಲ ಪತ್ನಿಯಿಂದ ಪಡೆದ ಮಕ್ಕಳನ್ನು ಪೋಷಿಸುವ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.