



ಕಾರ್ಕಳ : ಲೋಪದೋಷವಿಲ್ಲದೇ ಯಾವುದೇ ಯೋಜನೆಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುವಲ್ಲಿ ಶಾಸಕರ ಪಾತ್ರ ಮಹತ್ವದಾಗಿರುತ್ತದೆ. ಕಾರ್ಕಳ ತಾಲೂಕಿನ ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಶ್ರೀ ಪರಶುರಾಮನ ಬೃಹತ್ ಆಕಾರದ ಮೂರ್ತಿ ಸ್ಥಾಪನೆಯಲ್ಲಿ ಬಳಸಲಾದ ಲೋಹದ ಕುರಿತು ಲೋಪದೋಷಗಳು ಜಗಜಾಹೀರುಗೊಂಡಿದ್ದು, ಅದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕಾದ ಹೊಣೆಗಾರಿಕೆಯು ಶಾಸಕ ಸುನೀಲ್ ಕುಮಾರ್ ಅವರದಾಗಬೇಕು.
ಆ ಮೂಲಕ ಅವರು ಪ್ರಜಾಪ್ರಭುತ್ವದ ಮೇಲಿನ ಗೌರವವನ್ನು ಪರಿಪಾಲಿಸಬೇಕೆಂದು ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿಯಲ್ಲಿ ರಾಜಕೀಯ ಮಾಡುದಿಲ್ಲ
ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡಿಲ್ಲ. ಮೂಲ ಕಾಂಗ್ರೆಸ್ಸಿಗನಾಗಿದ್ದು, ಈ ಕ್ಷಣದ ವರೆಗೂ ಅದೇ ಪಕ್ಷದಲ್ಲಿ ಇದ್ದೇನೆ. ಮುಂದೆಯೂ ಇರುತ್ತೇನೆ. ರಾಜಕೀಯ ಬಣ್ಣ ಬದಲಾಯಿಕೊಳ್ಳುವ ಗೋಸುಂಬೆ ನನ್ನಲ್ಲ. ಜನಪರ ಅಭಿವೃದ್ಧಿ ಕಾಮಗಾರಿಗೆ ಸದಾ ಬೆಂಬಲಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಅಭಿವೃದ್ಧಿಯ ನೆಪದಲ್ಲಿ ಕೊಳ್ಳೆ ಹೊಡೆಯುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಕ್ರಿಯೆಗಳು ಕಾರ್ಕಳದಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲಿ ಅದರ ಜಾತಕವನ್ನು ಬಹಿರಂಗ ಪಡಿಸುತ್ತೇನೆಂದರು.
ಪರಶುರಾಮ ಥೀಮ್ ಪಾಕ್೯ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಭಾರೀ ದೊಡ್ಡ ಹಗರಣಗಳಲ್ಲಿ ಕಾರ್ಕಳದ ಪರಶುರಾಮ ಥೀಮ್ ಪಾಕ್೯ ಒಂದಾಗಿದೆ.
ಪರಶುರಾಮ ಥೀಮ್ ಪಾಕ್೯ ಗೆ ಸರಕಾರದಿಂದ ಭೂಮಿ ಮಂಜೂರಾಗದೇ ಕೋಟ್ಯಾಂತರ ರೂ. ಅನುದಾನ ಮಂಜೂರು ಆಗಿರುವುದು ಹಗರಣ ಒಂದು ಭಾಗವಾಗಿದೆ.
ಪರಶುರಾಮ ಥೀಮ್ ಪಾಕ್ ೯ನ ಯೋಜನೆಯ ಅಂದಾಜು ವೆಚ್ಚ ರೂ. 14.42 ಕೋಟಿ ಆಗಿದ್ದು, ಅಂದಿನ ಬಿಜೆಪಿ ಸರಕಾರವು ಯಾವುದೇ ಅನುಮೋದನೆ ಇಲ್ಲದೇ ರೂ. 6.72 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಪರಶುರಾಮ ಮೂರ್ತಿಗೆ ರೂ. 2.04 ಕೋಟಿ ಕಾದಿರಿಸಲಾಗಿತ್ತು.
ಪರಶುರಾಮ ಥೀಮ್ ಪಾಕ್೯ ನಿರ್ಮಾಣದ ವೇಳೆ ಸುಮಾರು 2 ಕೋಟಿ ಮೊತ್ತ ಸಮರ್ಪಕವಾದ ಬಿಲ್ ಇಲ್ಲದೆ ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪರಶುರಾಮ ಮೂರ್ತಿಗೆ ರೂ. 2.04 ಕೋಟಿ ಕಾದಿರಿಸಲಾಗಿದ್ದರೂ, ಪರಶುರಾಮ ಥೀಮ್ ಪಾಕ್೯ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ 2.18 ಕೋಟಿ ಖರ್ಚು ಭರಿಸಲಾಗಿದೆ. ಇದರಲ್ಲಿ 60 ಲಕ್ಷಕ್ಕೆ ಸಮರ್ಪಕವಾದ ಬಿಲ್ ಇಲ್ಲ. ಇದರ ಕುರಿತು ಸರಕಾರದ ಮಟ್ಟದಲ್ಲಿ ತನಿಖೆಯಾಗಬೇಕೆಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ನಕಲಿ ಮೂರ್ತಿ ಬದಲಾಯಿಸುವ ಹುನ್ನಾರ
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಲ್ಲೇಬೇಕೆಂಬ ಪಣತೊಟ್ಟು ನಾನಾ ರೀತಿಯಲ್ಲಿ ಕಸರತು ನಡೆಸಿರುವ ಶಾಸಕ ಸುನೀಲ್‌ಕುಮಾರ್ ಅವರಿಗೆ ಅಗ ನೆನಪಿಗೆ ಬಂದಿರುವುದು ಪರಶುರಾಮ ಥೀಮ್ ಪಾಕ್೯. ಧರ್ಮ, ಕಾನೂನು, ದೇಶ, ಅಭಿವೃದ್ಧಿ ಎಂದೆಲ್ಲ ಮಂತ್ರ ಪಠಿಸುವ ಶಾಸಕ ಸುನೀಲ್ ಕುಮಾರ ಅವರು ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಅದು ಜಗಜಾಹೀರು ಗೊಳ್ಳುತ್ತಿದ್ದಂತೆ ನಾನಾ ಕಾರಣವೊಡ್ಡಿ ಪರಶುರಾಮ ಥೀಮ್ ಪಾಕ್೯ ಪ್ರವೇಶಕ್ಕೆ ನಾಗರಿಕರಿಗೆ ಅವಕಾಶ ನೀಡದೇ ಪ್ರತಿಮೆಗೆ ದಿಬ್ಬಂಧನ ಹಾಕುವಲ್ಲಿ ಯಶಸ್ಸು ಕಂಡಿದ್ದಾರೆ.
ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ "ಡಿಗ್ರಿ" ಸರಿ ಇಲ್ಲ ಎಂಬ ನೆಪದಲ್ಲಿ ಪ್ರತಿಮೆಯನ್ನೇ ಬದಲಾಯಿಸಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಹುನ್ನಾರದಲ್ಲಿ ಶಾಸಕ ಸುನೀಲ್ ಕುಮಾರ್ ಮುಂದಾಗಿದ್ದಾರೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.