



ಕಾರ್ಕಳ: ರಂಜಿತ್ ನೀರೆಯವರ ನೇತೃತ್ವದಲ್ಲಿ ಕಾರ್ಕಳ ನೀರೆಬೈಲೂರು ಯುವಕರ ತಂಡವು ಪ್ರಸ್ತುತ ಪಡಿಸಿರುವ ಒಂದು ಶಾರ್ಟ್ ಕ್ಲಿಪ್ಪಿನ ಆಕ್ಷನ್ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪ್ರಿ ವೆಡ್ಡಿಂಗ್ ಶೂಟ್, ಫೋಟೋ ಶೂಟ್ ಹಾಗೂ ಚಿತ್ರೀಕರಣದಲ್ಲಿ ತನ್ನದೇ ಆದಂತಹ ಕ್ರಿಯೇಟಿವಿಟಿಯನ್ನು ಹೊಂದಿರುವ ರಂಜಿತ್ ನೀರೆ ಈ ಶಾರ್ಟ್ ವಿಡಿಯೋ ಅನ್ನು ರಚಿಸಿದ್ದು, ತಮಿಳಿನ ಬಿಗಿಲ್ ಚಿತ್ರದ ಒಂದು ತುಣುಕನ್ನು ಆಯ್ದುಕೊಂಡು, ನೀರೆ ಯುವಕರ ತಂಡ ತಮ್ಮದೇ ಶೈಲಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ.
ನೀರೆ ಯುವಕರ ಈ ಶಾರ್ಟ್ ಕ್ಲಿಪ್ಪಿನ ತುಣುಕು ಸಿನಿಮಾ ರಚನೆಯ ಮಾದರಿಯಲ್ಲಿದ್ದು, ಯುವ ಪ್ರತಿಭೆಯನ್ನು ಪ್ರೋತ್ಸಾಹಿಸುವಂತಾಗಿದೆ.
ಸದ್ಯ ರಂಜಿತ್ ನೀರೆಯವರ ಈ ಶಾರ್ಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಪಾರ ಜನಮೆಚ್ಚುಗೆ ಪಡೆದಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.