logo
WhatsApp Image 2026-04-02 at 14.46.04.jpeg
hindalco everlast.jpeg

ನ.1 ರಿಂದ ಬಿಸಿಯೂಟ ಯೋಜನೆ ಆರಂಭಿಸುವಂತೆ ರಾಜ್ಯ ಸರಕಾರದ ಆದೇಶ

ಟ್ರೆಂಡಿಂಗ್
share whatsappshare facebookshare telegram
2 Oct 2021
post image

ಬೆಂಗಳೂರು: ನವೆಂಬರ್ 1, ರಿಂದ ಬಿಸಿಯೂಟ ಹಾಗೂ ಬಿಸಿ ಹಾಲು ವಿತರಣೆ ಮಾಡುವ ಮೂಲಕ ರಾಜ್ಯದ ಶಾಲೆಗಳಲ್ಲಿ ವಿದ್ಯುಕ್ತವಾಗಿ ಸ್ಥಗಿತಗೊಂಡಿದ್ದಂತ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸೋದಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ದಿನಪೂರ್ತಿ ತರಗತಿಯ ನಡೆಸುವಂತೆ ಸುತ್ತೋಲೆ ಹೊರಡಿಸಿದ ಬಳಿಕ ಈಗ ಮತ್ತೆ ನ.1 ರಿಂದ ಬಿಸಿಯೂಟ ಬಿಸಿ ಹಾಲು ಪ್ರಾಂಭಿಸುವ ಮೂಲಕ ಪೂರ್ಣ ಪ್ರಮಾಣದ ಶಾಲೆಯು ಪ್ರಾರಂಭಿಸಿದಂತಾಗುತ್ತದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ಜಂಟಿ ನಿರ್ದೇಶಕರಾದಂತ ಟಿ.ನಾರಾಯಣಗೌಡ ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, 2021-22ನೇ ಸಾಲಿನ ಮಧ್ಯಾಹ್ನ ಉಪಹಾರ ಯೋಜನೆಯಡಿ 1 ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟವನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ಕೆಲವೊಂದು ಕ್ರಮಗಳನ್ನು ಅನುಸರಿಸುವ ಬಗ್ಗೆ ಕರಡು ಪ್ರಸ್ತಾವನೆಯನ್ನು ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಕೂಡಲೇ ಅ.10 ರೊಳಗೆ ಸಲ್ಲಿಸಲು ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.