



ಬೆಂಗಳೂರು: ಸದ್ಯ ರಾಜ್ಯದಲ್ಲಿ ಸರ್ಕಾರ ರಚನೆಗೆ ಕೌಂಟ್ ಡೌನ್ ಆರಂಭವಾಗಿದೆ. ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಯಾರು ಆಗುತ್ತಾರೆ ಎಂಬ ಜಟಾಪಟಿ ನಡುವೆ ರಾಜ್ಯ ಹೋಟೆಲ್ ಮಾಲೀಕರ ಸಂಘ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ.
ಸರ್ಕಾರ ರಚನೆ ಆಗುವ ಮುನ್ನವೇ ಹೋಟೆಲ್ ಮಾಲೀಕರ ಸಂಘ ಅಧಿಕಾರಕ್ಕೆ ಬರುವ ಸರ್ಕಾರ ನಮ್ಮ ಅಹವಾಲುಗಳನ್ನು ಆಲಿಸಿ ಪರಿಹಾರ ಕೊಡಬೇಕು ಅಂತ ಪಟ್ಟು ಹಿಡಿದಿತ್ತು. ಅದೇ ರೀತಿ ಈಗ ಕೈ ಪಾಳಯದ ಮುಂದೆ ಬೇಡಿಕೆಗಳ ಲಿಸ್ಟ್ ಇಟ್ಟಿದೆ.
ಹೋಟೆಲ್ ಸಂಘದ ಪ್ರಮುಖ ಬೇಡಿಕೆ:
24/7 ಹೊಟೇಲ್ ತೆಗೆಯುವುದಕ್ಕೆ ಅನುಮತಿ
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ
ವಿದ್ಯುತ್ ದರ ಏರಿಕೆ , ನೀರಿನ ಸಮಸ್ಯೆ, ಆಸ್ತಿ ತೆರಿಗೆ ಸಮಸ್ಯೆ
ಪೊಲ್ಯುಶನ್ ಕಂಟ್ರೋಲ್ ಬೋರ್ಡ್ ಶುಲ್ಕ
ನಿರಂತರ ಏರಿಕೆ ಆಗುವ ಅವೈಜ್ಞಾನಿಕ ಶುಲ್ಕಕ್ಕೆ ಬ್ರೇಕ್
ನಗರದಲ್ಲಿ 24/7 ಹೊಟೇಲ್ ತೆಗೆಯುವುದಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ರೂ ಹಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದರೂ ನಮ್ಮ ನಗರದಲ್ಲಿ ಇದುವರೆಗೂ ಕೂಡ ಅನುಮತಿ ಕೊಟ್ಟಿಲ್ಲ. ನಮಗೆ 24/7 ಹೊಟೇಲ್ ಓಪನ್ ಮಾಡುವುದಕ್ಕೆ ಅನುಮತಿ ಕೊಡಬೇಕು ಅಂತ ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲ ಈ ಹಿಂದಿನ ಸರಕಾರದಲ್ಲಿ ಆಗಾಗ ಪ್ರವಾಸೋದ್ಯಮ ಸಚಿವರ ಬದಲಾವಣೆ ಆಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿತ್ತು. ಈ ಹಿನ್ನೆಲೆ ಈ ಭಾರಿ ಪ್ರವಾಸೋದ್ಯಮ ಅಭಿವೃದ್ದಿ ಆಗಲು ಆದ್ಯತೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.