



ನವದೆಹಲಿ:ಭೂಮಿಯ ಸುತ್ತ ತನ್ನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಏರಿರುವ ಚಂದ್ರಯಾನ-3 ನೌಕೆ, ಆಗಸ್ಟ್-1ರ ವೇಳೆಗೆ ಚಂದ್ರನ ಕಕ್ಷೆಯತ್ತ ಸಾಗಲಿದೆ.
ಈ ನಡುವೆ ಪೋಲೆಂಡ್‌ನಲ್ಲಿರುವ ಟೆಲಿಸ್ಕೋಪ್, ಬಾಹ್ಯಾಕಾಶದ ಆಳದಲ್ಲಿ ಚಂದ್ರಯಾನ-3 ಸಾಗುತ್ತಿರುವ ವಿಡಿಯೋವನ್ನು ಸೆರೆ ಹಿಡಿದಿದೆ.
ಆಗಸ್ಟ್ 1ರ ವೇಳೆಗೆ ಚಂದ್ರಯಾನ ನೌಕೆ ತನ್ನ ಪಥವನ್ನು ಚಂದ್ರನತ್ತ ಬದಲಿಸಲಿದೆ. ಈ ನಡುವೆ ಪೋಲೆಂಡ್‌ನಲ್ಲಿರುವ ರೋಟುಜ್ (ಪನೋಪ್ಟ್ಸ್-4) ಟೆಲಿಸ್ಕೋಪ್ ಬಾಹ್ಯಾಕಾಶದ ಆಳದಲ್ಲಿ ಚಂದ್ರಯಾನ-3 ನೌಕೆ ಸಾಗುತ್ತಿರುವ ವೇಗವನ್ನು ಆಕರ್ಷಕವಾಗಿ ಸೆರೆ ಹಿಡಿದಿದೆ.
ಟೆಲಿಸ್ಕೋಪ್‌ನ ನಿವರ್ಹಣೆ ಮಾಡುವ ಸೈಬಿಲ್ಲಾ ಟೆಕ್ನಾಲಜೀಸ್ ಕೂಡ ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ. ಡೀಪ್ ಸ್ಪೇಸ್‌ನಲ್ಲಿ ಚಿಕ್ಕ ಬಿಂದುವಿನಂತೆ ಕಾಣುವ ಚಂದ್ರಯಾನ-3 ನೌಕೆ ಅತ್ಯುತ್ತಮ ವೇಗದಲ್ಲಿ ಸಾಗುತ್ತಿದೆ ಎಂದು ಬರೆದುಕೊಂಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.