


ಬೆಂಗಳೂರು: ಯುಟ್ಯೂಬ್ ಒಂದಿದ್ದರೆ ಜನ ಏನ್ ಬೇಕಾದ್ರೂ ಮಾಡ್ತಾರೆ ಕಲಿತಾರೆ ಎನ್ನುವುದು ಸುಳ್ಳಲ್ಲ.ಈಗ ಯುಟ್ಯೂಬ್ ಮೂಲಕ ಕಳ್ಳತನವನ್ನೂ ಕಲಿತಾರೆ ಎನ್ನುವುದು ಬಹಿರಂಗವಾಗಿದ್ದು ಹಾಗೆ ಕಳ್ಳತನ ಮಾಡಿದ ಕಳ್ಳರು ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಬ್ಬರು ಯುವಕರು ಯೂಟ್ಯೂಬ್ ಮೂಲಕ ಬೈಕ್ ಕಳವು ತರಬೇತಿ ಪಡೆದು ಕಳ್ಳತನಕ್ಕಿಳಿದ್ದಾರೆ. ಇದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಇದೀಗ ಅವರು ಪೊಲೀಸರ ಅತಿಥಿಯಾಗಿದ್ದಾರೆ.
ಯೂಟ್ಯೂಬ್ ಮೂಲಕ ಬೈಕ್ ಕಳವು ತರಬೇತಿ ಪಡೆದು ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 13 ಲಕ್ಷ ಮೌಲ್ಯದ 20 ಬೈಕ್ ಗಳು ವಶಕ್ಕೆ ಪಡೆದಿದ್ದಾರೆ. ಯೂಟ್ಯೂಬ್‌ನಲ್ಲಿ ಬೈಕ್ ಕೀ ಮುರಿಯೋದು, ಸ್ಟಾರ್ಟ್ ಮಾಡೋದು ಕಲಿತಿದ್ದಾರೆ
ಯೂಟ್ಯೂಬ್ ನಲ್ಲಿ ಬೈಕ್ ಕೀ ಮುರಿಯೋದು, ಅದನ್ನು ಸ್ಟಾರ್ಟ್ ಮಾಡೋದು ಹೇಗೆ ಅನ್ನೋದನ್ನು ಕಲಿತಿದ್ದಾರೆ. ಆ ನಂತರ ನಗರದ ಹಲವು ಕಡೆಗಳಲ್ಲಿ ಈ ಆರೋಪಿಗಳು ಬೈಕ್ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಂತ್ರಜ್ಞಾನದಿಂದ ಒಳ್ಳೆದು ಎಷ್ಟ್ ಆಗುತ್ತೋ ಕೆಟ್ಟದ್ದೂ ಆಗುತ್ತೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.